70 ಹುಲಿಗಳ ಹಂತಕ 'ಟೈಗರ್​ ಹಬೀಬ್​' 20 ವರ್ಷದ ಬಳಿಕ ಕೊನೆಗೂ ಸಿಕ್ಕಿಬಿದ್ದ!

tiger habeeb
Published on

ಢಾಕಾ: 70ಕ್ಕೂ ಹೆಚ್ಚು ಬಂಗಾಳ ಹುಲಿಗಳನ್ನು ಕೊಂದು 20 ವರ್ಷದಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಬೇಟೆಗಾರ ಹಬೀಬ್​ ತಾಲುಕ್ದೇರ್​ ಅಲಿಯಾಸ್​ ಟೈಗರ್​ ಹಬೀಬ್​ ಎಂಬಾತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕರ್ನಾಟಕದಲ್ಲಿ ನರಹಂತಕ ವೀರಪ್ಪನ್​ ಇದ್ದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸುಂದರ್​ ಬನ್​ ಅರಣ್ಯ ಪ್ರದೇಶದಲ್ಲಿ ಕುಖ್ಯಾತ ಬೇಟೆಗಾರ ಹಬೀಬ್ ಇದ್ದ. ಅರಣ್ಯದಂಚಿನಲ್ಲಿ ವಾಸವಿರುತ್ತಿದ್ದ ಈತನಿಂದ ಹುಲಿ ಮೂಳೆ, ಮಾಂಸ, ಉಗುರು, ಚರ್ಮ, ಹಲ್ಲಗಳನ್ನು ಕಾಳಸಂತೆಯಲ್ಲಿ ವ್ಯಾಪಾರಿಗಳು ಖರೀದಿಸಿ ಚೀನಾ ಮತ್ತು ಇತರೆಡೆ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿರಿ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

ಜೇನು ಸಾಕಣೆ ನೆಪದಲ್ಲಿ ಕಾಡಂಚಿನಲ್ಲಿ ನೆಲೆಸಿದ್ದ ಹಬೀಬ್​, ಹುಲಿಗಳನ್ನು ಕೊಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಈತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗಲೆಲ್ಲ ತಲೆಮರೆಸಿಕೊಳ್ಳುತ್ತಿದ್ದ. 20 ವರ್ಷದ ಬಳಿಕ ಕೊನೆಗೂ ಹುಲಿ ಹಂತಕನನ್ನು ಸೆರೆ ಹಿಡಿದು ಜೈಲಿಗಟ್ಟುವಲ್ಲಿ ಬಾಂಗ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net