ಐಎಎಸ್​ ಅಧಿಕಾರಿ ದೀಪಾ ಚೋಳನ್​ರ ತಂದೆ-ತಾಯಿ ಕರೊನಾಗೆ ಬಲಿ, ಅತ್ತೆ-ಮಾವ ಆಸ್ಪತ್ರೆಗೆ ದಾಖಲು

deepa cholan
Published on

ಬೆಂಗಳೂರು: ಐಎಎಸ್​ ಅಧಿಕಾರಿ ದೀಪಾ ಚೋಳನ್​ ಅವರ ತಂದೆ ಮತ್ತು ತಾಯಿ ಇಬ್ಬರೂ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ.

ದೀಪಾ ಚೋಳನ್​ ಪತಿ ರಾಜೇಂದ್ರ ಚೋಳನ್​ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ದೀಪಾ ಮತ್ತು ರಾಜೇಂದ್ರ ದಂಪತಿ ಇಬ್ಬರೂ ಮಹಾಮಾರಿ ಕರೊನಾ ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ನಗರದ ಕೋವಿಡ್​ ನಿರ್ವಹಣೆಯ ಹೊಣೆ ಹೊತ್ತಿರುವ ರಾಜೇಂದ್ರ ಚೋಳನ್​ ಅವರಿಗೆ ಅತ್ತೆ-ಮಾವನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲೂ ಸಾಧ್ಯವಾಗಿಲ್ಲ. ಅತ್ತ ರಾಜೇಂದ್ರ ಅವರ ತಂದೆ-ತಾಯಿಗೂ ಕರೊನಾ ಸೋಂಕು ತಗುಲಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿರಿ ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

ದೀಪಾ ಅವರ ತಂದೆ-ತಾಯಿಗೆ ಕರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ 10 ದಿನಗಳ ಅಂತರದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಮೇ 26ರಂದು ತಂದೆ ಮೃತಪಟ್ಟರೆ, ಇದಕ್ಕೂ ಮುನ್ನವೇ ತಾಯಿ ಕೊನೆಯುಸಿರೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net