ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

suicide
Published on

ಚಾಮರಾಜನಗರ: ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಒಂದೇ ಕುಟಂಬ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ ಮತ್ತು ಮಕ್ಕಳಾದ ಜ್ಯೋತಿ, ಶ್ರುತಿ ಮೃತ ದುರ್ದೈವಿಗಳು. ಅಕ್ಕಪಕ್ಕದ ಮನೆಯವರು ಬುಧವಾರ ಬೆಳಗ್ಗೆ ಕಿಟಕಿಯಲ್ಲಿ ನೋಡಿದ್ದು, ಒಳಗೆ ನೇಣುಬಿಗಿದ ಸ್ಥಿತಿಯಲ್ಲಿ ನಾಲ್ವರ ಶವ ನೇತಾಡುವುದು ಕಂಡು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net