VIDE0| ಮಧ್ಯರಾತ್ರಿ ಅಡುಗೆಮನೆಯ ಗ್ಯಾಸ್ ಸ್ಟೌವ್​ ಕೆಳಗೆ ಬೆಚ್ಚಗೆ ಮಲಗಿದ್ದ ನಾಗರಹಾವು!

nagarahavu
Published on

ಮೈಸೂರು: ಅಡುಗೆ ಮನೆಯ ಗ್ಯಾಸ್ ಸ್ಟವ್ ಕೆಳಗೆ ಮಲಗಿದ್ದ ಸುಮಾರು 3 ಅಡಿ ಉದ್ದದ ನಾಗರಹಾವೊಂದು ಮಧ್ಯರಾತ್ರಿ ಮನೆ ಮಂದಿಯ ನಿದ್ದೆಗೆಡಿಸಿದೆ.

ನಿನ್ನೆ(ಗುರುವಾರ) ಮಧ್ಯರಾತ್ರಿ ಮೈಸೂರು ನಗರದ ನಿವಾಸಿ ಬಿಎಂಶ್ರೀ ಶಶಿ ಎಂಬುವರ ಮನೆಯ ಅಡುಗೆ ಮನೆಯೊಳಗೆ ನಾಗರಹಾವು ಸೇರಿಕೊಂಡಿತ್ತು. ಇದ್ಯಾವುದರ ಪರಿವೆ ಇಲ್ಲದ ಮನೆಯವರು ನಿದ್ರೆಗೆ ಜಾರಿದ್ದರು. ಮಧ್ಯರಾತ್ರಿ ಅಡುಗೆ ಮನೆಯಲ್ಲಿ ಏನೋ ಬಿದ್ದ ಶಬ್ದ ಕೇಳಿಸಿತ್ತು. ನಿದ್ರೆಯಿಂದ ಎಚ್ಚೆತ್ತ ಆ ಮನೆಯ ಗೃಹಿಣಿ, ಹೋಗಿ ನೋಡಿದ್ರೆ ಗ್ಯಾಸ್​ ಸ್ಟೌವ್​ ಕೆಳಗೆ ಬೆಚ್ಚಗೆ ಮಲಗಿದೆ ಬುಸ್​ ಬುಸ್​ ನಾಗಪ್ಪ!

ಹಾವನ್ನು ಕಂಡ ಕೂಡಲೇ ಮನೆಯವರನ್ನೆಲ್ಲ ಗೃಹಿಣಿ ಎಬ್ಬಿಸಿದ್ದಾರೆ. ಕೂಡಲೇ ಮನೆಯವರು ಸ್ನೇಕ್ ಸೂರ್ಯಕೀರ್ತಿ ಅವರಿಗೆ ಕಾಲ್ ಮಾಡಿದ್ದಾರೆ. ಮನೆಗೆ ಆಗಮಿಸಿದ ಸೂರ್ಯಕೀರ್ತಿ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದು, ಕುಟುಂಬಸ್ಥರು ನಿಟ್ಟುಸಿರುಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net