

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೊಡುತ್ತಿರುವ ಕಿರುಕುಳ ಸಹಿಸಿಕೊಳ್ಳಲಾಗ್ತಿಲ್ಲ. ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ. ಅವರೂ ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಐಎಎಸ್ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ? ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ದುರಾಹಂಕಾರ, ಹೀಗೋದಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಐಎಎಸ್ ಹುದ್ದೆಗೇ ರಾಜೀನಾಮೆ ಕೊಟ್ಟೀದ್ದೀನಿ ಎಂದು ನಿನ್ನೆ(ಗುರುವಾರ) ಮಾಧ್ಯಮಗಳ ಮುಂದೆ ಘೋಷಿಸುವ ಮೂಲಕ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಭಾರೀ ಸಂಚಲನ ಮೂಡಿಸಿದ್ದರು.
ಇದೀಗ ರಾಜೀನಾಮೆ ವಿದ್ಯಮಾನವೇ ಹೈಡ್ರಾಮ, ಬೆದರಿಕೆ ತಂತ್ರಕ್ಕೆ ಶಿಲ್ಪಾನಾಗ್ ಮುಂದಾಗಿದ್ದಾರಾ? ಎಂಬ ಅನುಮಾನ ಮೂಡಿದೆ. ಇಬ್ಬರು ಐಎಎಸ್ ಅಧಿಕಾರಿಗಳ ಸಮರ ಬಹಿರಂಗಗೊಂಡ ಬೆನ್ನಲ್ಲೇ ಶುಕ್ರವಾರ ಮೈಸೂರಿಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರವಿಕುಮಾರ್, ಶಿಲ್ಪಾನಾಗ್ ಅವರ ರಾಜೀನಾಮೆ ಪತ್ರ ಬಂದಿಲ್ಲ. ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿರಿ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ
ರಾಜೀನಾಮೆ ವಿದ್ಯಮಾನವೇ ಹೈಡ್ರಾಮ? ಮಹಾನಗರ ಪಾಲಿಕೆ ಆಯುಕ್ತರು ರಾಜೀನಾಮೆಯನ್ನೇ ಕೊಟ್ಟಿಲ್ವ? ನಿನ್ನೆ ನಡೆದ ಸುದ್ದಿಗೋಷ್ಠಿ 'ಬುಟ್ಟಿಯಲ್ಲಿ ಹಾವಿದೆ' ಅನ್ನುವ ಸಂದೇಶ ರವಾನೆಗೆ ಮಾತ್ರ ಸೀಮಿತನಾ? ರಾಜೀನಾಮೆ ಪತ್ರ ತಲುಪಿಲ್ಲ ಅಂದಿದ್ದೀಕೆ ಸಿಎಸ್? ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ತಲುಪಿಲ್ಲ ಅಂದ್ರೆ ರಾಜೀನಾಮೆ ಕೊಟ್ಟಿರೋದೇ ಸುಳ್ಳಾ? ಹೀಗೆ ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ ಸಿಎಸ್ ರವಿಕುಮಾರ್ರ ಹೇಳಿಕೆ.
ಇತ್ತ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸಭೆ ನಡೆಸಿದ್ದು. ಸಭೆಗೆ ಗೈರಾಗಿದ್ದ ಶಿಲ್ಪಾನಾಗ್ ಅವರು ಸಿಎಸ್ ಅವರ ಸೂಚನೆಗೆ ಮೇರೆಗೆ ಸಭೆಗೆ ಆಗಮಿಸಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ಅವರು ಸಭೆಯಲ್ಲಿ ಮುಖಾಮುಖಿ ಕುಳಿತಿದ್ದರು. (ದಿಗ್ವಿಜಯ ನ್ಯೂಸ್)