ವಿಧಿಯೇ ನೀನೆಷ್ಟು ಕ್ರೂರಿ... ಒಟ್ಟಿಗೆ ಕುಳಿತು ಪ್ರಾರ್ಥನೆ ಮುಗಿಸಿ, ಊಟ ಮಾಡಿದ ಕೆಲವೇ ಕ್ಷಣದಲ್ಲಿ ಸ್ನೇಹಿತರಿಬ್ಬರ ದುರಂತ ಸಾವು

accident
Published on

ತುಮಕೂರು: ವಿಧಿಯನ್ನೊಮ್ಮೆ ಶಪಿಸಬೇಕು ಅನ್ನಿಸುತ್ತೆ ಈ ಘಟನೆ ನೋಡಿದ್ರೆ. ಅವರಿಬ್ಬರು ಸ್ನೇಹಿತರು. ಒಟ್ಟಿಗೆ ಕುಳಿತು ನಮಾಜ್​ ಮುಗಿಸಿ ಊಟವನ್ನೂ ಮಾಡಿದ್ರು. ಇದಾದ ಕೆಲವೇ ಕ್ಷಣದಲ್ಲಿ ನಡುರಸ್ತೆಯಲ್ಲಿ ಇಬ್ಬರೂ ದುರಂತ ಅಂತ್ಯಕಂಡಿದ್ದಾರೆ.

ಲುಕ್ಸಾನ್(20) ಹಾಗೂ ಅಪ್ರೋಜ್ (18) ಮೃತ ದುರ್ದೈವಿಗಳು. ಲುಕ್ಸಾನ್ ತುಮಕೂರಿನ ಸದಾಶಿವನಗರದ ನಿವಾಸಿ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ಹೆಗ್ಗೆರೆಯ ನಿವಾಸಿ ಅಪ್ರೋಜ್ ಮನೆಗೆ ಪ್ರತಿ ದಿನ ಬಂದು ಬೆಳಗಿನಜಾವ ನಮಾಜ್ ಮಾಡಿ ನಂತರ ಊಟ ಮಾಡಿ ಲುಕ್ಸಾನ್ ವಾಪಸ್ ಆಗುತ್ತಿದ್ದ. ಇದನ್ನೂ ಓದಿರಿ ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

ಅದೆ ರೀತಿ ಇಂದು(ಬುಧವಾರ) ಕೂಡ ಬಂದಿದ್ದ. ಬೆಳಗ್ಗೆ 5 ಗಂಟೆಯಲ್ಲಿ ನಮಾಜ್ ಮುಗಿಸಿ, ಊಟ ಮಾಡಿದ ಬಳಿಕ ತನ್ನ ಸ್ನೇಹಿತನನ್ನು ತುಮಕೂರಿಗೆ ಬಿಟ್ಟು ಬರಲೆಂದು ಲುಕ್ಸಾನ್ ಜತೆ ಅಪ್ರೋಜ್ ಬೈಕ್​ನಲ್ಲಿ ಹೋಗುತ್ತಿದ್ದ. ಈ ವೇಳೆ ತುಮಕೂರು-ಗುಬ್ಬಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸಿದ್ಧಾರ್ಥ ಡೆಂಟಲ್ ಕಾಲೇಜು ಮುಂಭಾಗ ತುಮಕೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್​ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್​ಐ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net