ಹೋಟೆಲ್​ನ ಬಾಗಿಲು ತೆರೆಯಲು ಬಂದ ಮಹಿಳೆಯ ಪ್ರಾಣ ತೆಗೆದ ಮರದ ಕೊಂಬೆ!

New Project (2)
Published on

ದೊಡ್ಡಬಳ್ಳಾಪುರ: ಸಾವು ಯಾವಾಗ? ಹೇಗೆ? ಸಂಭವಿಸುತ್ತೆ ಎಂದು ಊಹಿಸಿಕೊಳ್ಳೋದು ಕಷ್ಟ. ಹೋಟೆಲ್​ನ ಬಾಗಿಲು ತೆಗೆಯುತ್ತಿದ್ದ ಮಹಿಳೆ ಪಾಲಿಗೆ ಯಮನಂತೆ ಬಂದ ಮರದ ಕೊಂಬೆ ಆಕೆಯ ಪ್ರಾಣವನ್ನೇ ತೆಗೆದಿದೆ.

ಕೋಲಾರದ ವೆಂಕಟಾಲ ನಗರದ ಟಿ.ಬಿ.ನಾರಾಯಣಪ್ಪ ಬಡಾವಣೆ ನಿವಾಸಿ ಮಹಾಲಕ್ಷ್ಮೀ (48) ಮೃತೆ. ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆ ಬದಿ ಶೆಡ್​ನಲ್ಲಿ ಮಹಾಲಕ್ಷ್ಮೀ ಹೋಟೆಲ್​ ಇಟ್ಟುಕೊಂಡಿದ್ದರು.

ಗುರುವಾರ ಬೆಳಗ್ಗೆ ಹೋಟೆಲ್​ನ ಬಾಗಿಲು​ ತೆಗೆಯಲು ಹೋಗುತ್ತಿದ್ದಾಗ, ಆಲದ ಮರದ ಕೊಂಬೆ ಬಿದ್ದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net