ಆ ಒಂದು ಮಾತಿಗೆ ಆಕೆಯ ಉಸಿರನ್ನೇ ನಿಲ್ಲಿಸಿ ತಾನೂ ಸತ್ತ... ಛೇ ಇದೆಂಥಾ ಪ್ರೀತಿ?

murder case
Published on

ಹೊಸಕೋಟೆ: ಇಲ್ಲೊಬ್ಬ ಭಗ್ನಪ್ರೇಮಿ, ಪ್ರೀತಿಗೆ ಒಲ್ಲೆ ಎಂದಾಕೆಯನ್ನೆ ಕೊಂದು ಬಳಿಕ ತಾನೂ ದುರಂತ ಅಂತ್ಯ ಕಂಡಿದ್ದಾನೆ.

ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಲಿಂಗದೀರ ಮಲ್ಲಸಂದ್ರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಅಂಕೋಲ ಮೂಲದ ಉಷಾಗೌಡ (25) ಕೊಲೆಯಾದ ಯುವತಿ. ತಮಿಳುನಾಡು ಮೂಲದ ಗೋಪಾಲಕೃಷ್ಣ (30) ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಉಷಾ, ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೂ ತನ್ನನ್ನೇ ಪ್ರೀತಿ ಮಾಡುವಂತೆ ಗೋಪಾಲ ಈ ಹಿಂದೆ ಹಲವು ಬಾರಿ ಕೇಳಿಕೊಂಡಿದ್ದ. ಇದಕ್ಕೆ ಒಪ್ಪದ ಉಷಾ, ತಾನು ಬೇರೊಬ್ಬರನ್ನ ಇಷ್ಟಪಟ್ಟಿರುವೆ. ನಿಮ್ಮನ್ನ ಮದುವೆ ಆಗಲು ಸಾಧ್ಯವೇ ಇಲ್ಲ. ನನ್ನ ಸಹವಾಸಕ್ಕೆ ಬರಬೇಡಿ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಳಂತೆ.

ಅತ್ತ ಹಲವು ದಿನಗಳಿಂದ ಉಷಾಳ ಮೇಲೆ ಒಲವಿದ್ದ ಗೋಪಾಲ್​ಗೆ ಆಕೆಯನ್ನ ಬಿಟ್ಟಿರಲು ಮನಸ್ಸಾಗಿಲ್ಲ. ಬುಧವಾರ ಬೆಳಗ್ಗೆ ಲಿಂಗದೀರ ಮಲ್ಲಸಂದ್ರ ಗ್ರಾಮದಲ್ಲಿ ಉಷಾಳನ್ನು ಉಸಿರುಗಟ್ಟಿಸಿ ಕೊಂದ ಗೋಪಾಲ್​, ಬಳಿಕ ಗೆದ್ದಲಾಪುರ ಗ್ರಾಮದ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net