ಮಿಸ್​ ಯೂ ಫ್ರೆಂಡ್ಸ್​, ನಾನು ಸಾಯುವೆ, ನನ್ನ ಬ್ಯಾನರ್​ ಹಾಕಿ... ಎಂದು ಸಂದೇಶ ಕಳಿಸಿ ಪ್ರಾಣಬಿಟ್ಟ ವಿದ್ಯಾರ್ಥಿ

New Project(2)
Published on

ಕೋಲಾರ: 'Miss u Friends, I am going to RIP, nandu banner haki' ಎಂದು ಸ್ನೇಹಿತರ ವಾಟ್ಸ್ಆ್ಯಪ್​ ಗ್ರೂಪ್​ಗೆ ಮೆಸೇಜ್​ ಕಳಿಸಿದ ವಿದ್ಯಾರ್ಥಿಯೊಬ್ಬ ಕೆರೆಯ ಫೋಟೋ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂತಹ ದುರ್ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಕಿಶೋರ್ ಕುಮಾರ್ (17) ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡವ.

ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಿಶೋರ್, ಮಂಗಳವಾರ ಸಂಜೆ ಸ್ನೇಹಿತರಿಗೆ 'ಮಿಸ್​ ಯೂ ಫ್ರೆಂಡ್ಸ್​. ನಾನು ಸಾಯುತ್ತಿದ್ದೇನೆ. ಬ್ಯಾನರ್​ ಹಾಕಿ ನನಗೆ ಶ್ರದ್ಧಾಂಜಲಿ ಕೋರಿ' ಎಂದು ಮೆಸೇಜ್​ ಮಾಡಿದ್ದಾನೆ. ಕೂಡಲೇ ಗೆಳೆಯರು, 'ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ' ಎಂದು ರಿಪ್ಲೇ ಮಾಡಿದ್ದು, ಆನಂತರ ಕಿಶೋರ್​ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನ ಆಗಲೇ ಇಲ್ಲ. ಅಷ್ಟೆರಲ್ಲಿ ಕಿಶೋರ್​ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬುಧವಾರ ಬೆಳಗ್ಗೆ ಕಿಶೋರ್ ಕುಮಾರ್ ಶವವನ್ನ ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net