

ಉಡುಪಿ: ಇಲ್ಲೊಬ್ಬ ಕಾಮುಕ ಕಂಡ ಕಂಡವರ ಮನೆ ಮುಂದೆ ಬೆತ್ತಲಾಗಿ ತಿರುಗುತ್ತಿದ್ದ, ದಾರಿಯಲ್ಲಿ ಹೋಗುವ ಮಹಿಳೆಯರಿಗೆ ಕಿರಿಕಿರಿ ಮಾಡುತ್ತಿದ್ದ... ಇದ್ದಕ್ಕಿದ್ದಂತೆ ಮೂವರು ಮಹಿಳೆಯರ ಮೇಲೆ ಕತ್ತಿ ಬೀಸಿದ್ದಾನೆ...
ಇಂತಹ ಭಯಾನಕ ಘಟನೆ ಕಾರ್ಕಳದ ಕುಕ್ಕುಂದೂರಿನ ಪರಿಶಿಷ್ಟ ಕಾಲನಿಯಲ್ಲಿ ಗುರುವಾರ ಸಂಜೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಕೃತವಾಗಿ ವರ್ತಿಸುತ್ತಿದ್ದ ಆರೋಪಿ ಹೆಸರು ಮಹಮ್ಮದ್ ಹುಸೇನ್. ಈತ ಮನೆ ಮುಂದೆ ಬೆತ್ತಲಾಗಿ ತಿರುಗಿ ಮಹಿಳೆಯರನ್ನು ಪೀಡಿಸುತ್ತಿದ್ದ. ಬಹಿರ್ದೆಸೆಗೆ ಹೋಗುತ್ತಿದ್ದ ಮಹಿಳೆಯರ ಜತೆಗೂ ಅನುಚಿತವಾಗಿ ವರ್ತಿಸುತ್ತಿದ್ದನಂತೆ. ಹುಸೇನ್ನ ಹುಚ್ಚಾಟದಿಂದಾಗಿ ಕಾಲನಿಯ ಮಹಿಳೆಯರು ಭಯದಲ್ಲೇ ಬದುಕು ಸಾಗಿಸುತ್ತಿದ್ದರು.
ಗುರುವಾರ ಸಂಜೆ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆ ಬಂದ ಮೂವರು ಮಹಿಳೆಯರ ಮೇಲೆ ಕತ್ತಿಯಿಂದ ಏಕಾಏಕಿ ಹುಸೇನ್ ಹಲ್ಲೆ ಮಾಡಿದ್ದಾನೆ. ಈ ಪೈಕಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಮತ್ತಿಬ್ಬರ ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿಯನ್ನುಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮುಕ ಹುಸೇನ್ನನ್ನು ಊರಿನಿಂದ ಗಡಿಪಾರು ಮಾಡಿ ಎಂದು ಕಾಲನಿ ನಿವಾಸಿಗಳು ಆಗ್ರಹಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಆಗಮಿಸಿದ ವೇಳೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರಿಗೆ ಹುಸೇನ್ ಮತ್ತೆ ಜೀವ ಬೆದರಿಕೆ ಹಾಕಿದ್ದಾನೆ. ಆರೋಪಿ ಹುಸೇನ್ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಸಂತ್ರಸ್ತರ ಮನೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ನೀಡಿ ಧೈರ್ಯ ತುಂಬಿದರು.