More

  ಐಪಿಎಸ್​ ಅಧಿಕಾರಿ ಜತೆ ಹಯಾತಿ ಅನುಚಿತ ವರ್ತನೆ ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಸಿಸಿಟಿವಿ ವಿಡಿಯೋ!

  ಹೈದರಾಬಾದ್​: ಐಪಿಎಸ್​ ಅಧಿಕಾರಿಯ ಕಾರಿಗೆ ನಟಿ ಡಿಂಪಲ್​ ಹಯಾತಿ ಡಿಕ್ಕಿ ಹೊಡೆದಿದ್ದಲ್ಲದೆ, ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಐಪಿಎಸ್​ ಅಧಿಕಾರಿಯ ವಿರುದ್ಧವೇ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿದೆ.

  ಹಯಾತಿ ಅವರು ಜುಬಿಲಿ ಹಿಲ್ಸ್​ನ ಹುಡಾ ಎನ್​ಕ್ಲೇವ್​, ಜರ್ನಲಿಸ್ಟ್​ ಕಾಲನಿಯಲ್ಲಿರುವ ಎಸ್​ಕೆಆರ್​ ಅಪಾರ್ಟ್​ಮೆಂಟ್​ನಲ್ಲಿ ತನ್ನ ಫ್ರೆಂಡ್ ವಿಕ್ಟರ್​ ಡೇವಿಡ್​ ಜತೆ ವಾಸವಿದ್ದಾರೆ. ಅದೇ ಅಪಾರ್ಟ್​ಮೆಂಟ್​ನಲ್ಲಿ ಐಪಿಎಸ್​ ಅಧಿಕಾರಿ ರಾಹುಲ್​ ಹೆಗ್ಡೆ ಕೂಡ ನೆಲೆಸಿದ್ದಾರೆ. ರಾಹುಲ್​ ಹೆಗ್ಡೆ ಅವರು ಸಂಚಾರಿ ವಿಭಾಗದ ಉಪ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಇದನ್ನೂ ಓದಿ: ಹೊಸ ಸಂಸತ್​ ಭವನದಲ್ಲಿ ಪ್ರಧಾನಿಯಿಂದ ರಾಜದಂಡ ಸೆಂಗೋಲ್​ ಸ್ಥಾಪನೆ: ತಮಿಳಿನ ಸೆಂಗೋಲ್ ಹಿನ್ನೆಲೆ ಇಲ್ಲಿದೆ…

  ಐಪಿಎಸ್​ ಅಧಿಕಾರಿಗೆ ಗೊತ್ತುಪಡಿಸಲಾದ ಪಾರ್ಕಿಂಗ್​ ಜಾಗದಲ್ಲಿ ಹಯಾತಿ ತನ್ನ ಕಾರು ಪಾರ್ಕ್​ ಮಾಡುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಅಲ್ಲದೆ, ಈ ವಿಚಾರವಾಗಿ ಅನೇಕ ಬಾರಿ ಕ್ಯಾತೆ ತೆಗೆದಿದ್ದಾರೆ. ಪ್ರತಿ ಬಾರಿ ಪಾರ್ಕಿಂಗ್​ ಏರಿಯಾದಿಂದ ಹೊರ ಹೋಗುವಾಗ ಹಯಾತಿ ಅಧಿಕಾರಿಯ ಕಾರನ್ನು ಕಾಲಿನಿಂದ ಒದೆಯುತ್ತಿದ್ದರು. ಮೇ 14ರಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅಂದು ಹಯಾತಿ ಅವರು ಉದ್ದೇಶಪೂರ್ವಕವಾಗಿಯೇ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ, ತುಂಬಾ ಆಕ್ರಮಣಕಾರಿ ವರ್ತನೆ ತೋರಿ, ನಿಂದಿಸುವ ಮೂಲಕ ಅನುಚಿತವಾಗಿ ವರ್ತಿಸಿದರು ಎಂದು ಐಪಿಎಸ್​ ಅಧಿಕಾರಿಯ ಕಾರು ಚಾಲಕ ಆರೋಪ ಮಾಡಿದ್ದು, ಈ ಸಂಬಂಧ ಜುಬಿಲಿ ಹಿಲ್ಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

  ಹಯಾತಿಗೆ ಕಿರುಕುಳ

  ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಐಪಿಎಸ್​ ಅಧಿಕಾರಿ ದಾಖಲಿಸಿರುವ ಪ್ರಕರಣವು ಹಯಾತಿ ಮೇಲಿನ ಕಿರುಕುಳವಾಗಿದೆ. ಆಕೆಯ ಕಾರಿಗೆ ಹಾನಿಯನ್ನು ಉಂಟು ಮಾಡಿಲ್ಲ. ಬೇಕಿದ್ದರೆ ಸಿಸಿಟಿವಿ ದೃಶ್ಯಾವಳಿಯನ್ನೂ ಸಹ ಪರಿಶೀಲಿಸಬಹುದು ಎಂದು ಹಯಾತಿ ಪರ ವಕೀಲ ಪೌಲ್​ ಸತ್ಯನಂದನ್​ ಅವರು ಹೇಳಿದ್ದಾರೆ.

  (ವಿಡಿಯೋ ಕೃಪೆ: ಎನ್​ಟಿವಿ ಎಂಟರ್ಟೈನ್​ಮೆಂಟ್​)

  ಅಧಿಕಾರಿಯ ಕಾರಿನ ಮುಂದೆ ಹೇಗೆ ಬಂತು

  ವಿಡಿಯೋ ಸಹ ಬಹಿರಂಗವಾಗಿದ್ದು, ಅದರಲ್ಲಿ ಹಯಾತಿ ಅವರು ಅಧಿಕಾರಿ ಕಾರನ್ನು ಸ್ಪರ್ಶಿಸಿಯೇ ಇಲ್ಲ. ಬದಲಾಗಿ ಕಾರಿನ ಮುಂದೆ ಇದ್ದ ಟ್ರಾಫಿಕ್​ ಕೋನ್​ಗಳನ್ನು ಕಾಲಿನಿಂದ ಒದ್ದಿದ್ದಾರೆ. ಅಲ್ಲದೆ, ಕಾರಿನ ಮುಂದೆ ಟ್ರಾಫಿಕ್​ ಸಿಮೆಂಟ್​ ಬ್ಲಾಕ್​ಗಳನ್ನು ಇರಿಸಲಾಗಿದೆ. ಇದನ್ನು ಉಲ್ಲೇಖಿಸಿರುವ ಹಯಾತಿ ಪರ ವಕೀಲ, ಟ್ರಾಫಿಕ್​ ಸಿಮೆಂಟ್​ ಬ್ಲಾಕ್​ ಸರ್ಕಾರಿ ಆಸ್ತಿಯಾಗಿದೆ. ಅದು ಅಧಿಕಾರಿಯ ಕಾರಿನ ಮುಂದೆ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಧಿಕಾರಿ, ಕೆಲಸದ ಕರೆ ಬಂದಾಗ ತಕ್ಷಣ ಹೊರಡಬೇಕಾಗಿರುವುದರಿಂದ ಅವುಗಳನ್ನು ಅಲ್ಲಿ ಇರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದು ಅಧಿಕಾರ ದುರ್ಬಳಕೆ ಎಂದು ಹಯಾತಿ ಹೇಳಿದ್ದಾರೆ.

  ಇದನ್ನೂ ಓದಿ: ನಟಿ ಸಂಧ್ಯಾ ರೆಸಾರ್ಟ್​ನಲ್ಲಿ ನೀಚ ಕೃತ್ಯ: ಕೋಣೆಗೆ ನುಗ್ಗಿದ ರೂಮ್​ ಬಾಯ್,​ ಭಯಾನಕ ಸಂಗತಿ ಬಯಲು

  ತಪ್ಪುಗಳನ್ನು ಮರೆಮಾಚಲು ಸಾಧ್ಯವಿಲ್ಲ

  ಇಷ್ಟೇ ಅಲ್ಲದೆ, ಹಯಾತಿ ಟ್ವೀಟ್​ ಮೂಲಕ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ತಪ್ಪುಗಳನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯಮೇವ ಜಯತೆ ಎಂದಿದ್ದಾರೆ. ಅಲ್ಲದೆ, ಅಭಿಮಾನಿಗಳಿಗೂ ಸಂದೇಶ ರವಾನಿಸಿರುವ ಹಯಾತಿ, ಪ್ರಸ್ತುತ ನಡೆಯುತ್ತಿರುವ ಸಮಸ್ಯೆ ಏನೇ ಇರಲಿ, ನನ್ನ ಅಭಿಮಾನಿಗಳು ಮತ್ತು ಮಾಧ್ಯಮದ ಕಾಳಜಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಸಹಕಾರ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ನಾನು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ, ಆದ್ದರಿಂದ ನೀವು ತಾಳ್ಮೆಯಿಂದ ಕಾಯಬೇಕೆಂದು ನಾನು ವಿನಂತಿಸುತ್ತೇನೆ. ಈ ವಿಚಾರವನ್ನು ನನ್ನ ಕಾನೂನು ತಂಡವು ನೋಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

  ನಿನ್ನೆ ಐಪಿಎಸ್ ಅಧಿಕಾರಿ ರಾಹುಲ್​ ಹೆಗ್ಡೆ ಅವರು ಜುಬಿಲಿ ಹಿಲ್ಸ್​ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತನ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೂಡ ಅಧಿಕಾರಿ ರಾಹುಲ್ ಪರ ಇದ್ದಾರೆ ಎಂದು ಹಯಾತಿ ಅವರ ಪರ ವಕೀಲರು ಆರೋಪಿಸಿದ್ದಾರೆ.

  ಇದನ್ನೂ ಓದಿ: ಕೊಪ್ಪಳದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್​ಮ್ಯಾನ್​ಗೆ ಚಪ್ಪಲಿಯಿಂದ ಹಲ್ಲೆ

  ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಆಕೆ ನಟಿಸಿದ್ದ ರಾಮ ಬಾಣಂ ಚಿತ್ರ ತೆರೆಕಂಡಿತ್ತು. ಆದರೆ ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. (ಏಜೆನ್ಸೀಸ್​)

  ಐಪಿಎಸ್​ ಅಧಿಕಾರಿ ಜತೆ ಡಿಂಪಲ್​ ಹಯಾತಿ ಅನುಚಿತ ವರ್ತನೆ: ಕ್ರಿಮಿನಲ್​ ಪ್ರಕರಣ ದಾಖಲು

  ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹನ್ಸಿಕಾಗೆ ಹಿಂಸೆ ಕೊಟ್ಟರಂತೆ ಟಾಲಿವುಡ್​ನ​ ಖ್ಯಾತ ನಟ!

  ನಟಿ ಸಂಧ್ಯಾ ರೆಸಾರ್ಟ್​ನಲ್ಲಿ ನೀಚ ಕೃತ್ಯ: ಕೋಣೆಗೆ ನುಗ್ಗಿದ ರೂಮ್​ ಬಾಯ್,​ ಭಯಾನಕ ಸಂಗತಿ ಬಯಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts