More

  ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹನ್ಸಿಕಾಗೆ ಹಿಂಸೆ ಕೊಟ್ಟರಂತೆ ಟಾಲಿವುಡ್​ನ​ ಖ್ಯಾತ ನಟ!

  ಜೈಪುರ: ಪುನೀತ್​ ಅಭಿನಯದ ‘ಬಿಂದಾಸ್​’ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್​ ನಟಿ ಹನ್ಸಿಕಾ ಮೊಟ್ವಾನಿ ಕಳೆದ ವರ್ಷ ಉದ್ಯಮಿ ಹಾಗೂ ಸ್ನೇಹಿತೆಯ ಮಾಜಿ ಪತಿ ಸೊಹೈಲ್​ ಖಟುರಿಯಾ ಜತೆ ರಾಜಸ್ತಾನದಲ್ಲಿ ಮದುವೆ ಮಾಡಿಕೊಂಡ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಮದುವೆ ಯಾಗಿ ಸದ್ಯ ವೈವಾಹಿಕ ಜೀವನದ ಕಡೆ ಗಮನವಹಿಸಿರುವ ಹನ್ಸಿಕಾ ಇದೀಗ ಟಾಲಿವುಡ್​ನಲ್ಲಿ ನಡೆದ ಕಹಿ ಘಟನೆಯೊಂದನ್ನು ಮಾಧ್ಯಮದ ಮುಂಚೆ ಬಿಚ್ಚಿಟ್ಟಿದ್ದಾರೆ.

  ಪ್ರತಿದಿನ ರಾತ್ರಿ ಡೇಟಿಂಗ್​ ಬರಲು ಒತ್ತಾಯ

  ಹನ್ಸಿಕಾ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ತೆಲುಗು ಇಂಡಸ್ಟ್ರಿಯಲ್ಲಿ ನಡೆದ ಕಾಸ್ಟಿಂಗ್​ ಕೌಚ್​ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಂತೆ ನನಗೂ ಕೆಟ್ಟ ಅನುಭವವಾಗಿದೆ. ನಾಯಕ ನಟ ನನಗೆ ತುಂಬಾ ಕಾಟ ಕೊಟ್ಟನು. ಒಳ್ಳೆಯ ಮಾತಿನಿಂದ ಹೇಳಿದರೂ ಕೇಳಲಿಲ್ಲ. ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಒತ್ತಾಯ ಮಾಡುತ್ತಿದ್ದನು ಎಂದು ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ನೋಟು ಬದಲಾವಣೆ ಪ್ರಕ್ರಿಯೆ ಆರಂಭ: ಮೊದಲ ದಿನವೇ ಹಲವೆಡೆ ಗೊಂದಲ, ಬ್ಯಾಂಕುಗಳು ಹೇಳಿದ್ದೇನು?

  ಯಾರು ಆ ನಟ?

  ಟಾಲಿವುಡ್​ನ ಟಾಪ್​ ಹೀರೋ ವಿರುದ್ಧವೇ ಹನ್ಸಿಕಾ ಆರೋಪ ಮಾಡಿದ್ದಾರೆ. ಆದರೆ, ಆ ತೆಲುಗು ನಟ ಯಾರೆಂಬುದನ್ನು ಅವರು ಬಹಿರಂಗ ಪಡಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಇದು ಭಾರೀ ಚರ್ಚೆಯಾಗುತ್ತಿದೆ. ಯಾರ ಆ ನಟ ಎಂಬ ಊಹೆಗಳು ಶುರುವಾಗಿವೆ. ಹನ್ಸಿಕಾ ಅವರು ಒಂದು ಸಮಯದಲ್ಲಿ ಸ್ಟಾರ್​ ನಟಿಯಾಗಿದ್ದರಿಂದ ಅವರ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ.

  ವೈವಾಹಿಕ ಜೀವನ

  ಅಂದಹಾಗೆ ಹನ್ಸಿಕಾ ಅವರು ಕಳೆದ ಡಿಸೆಂಬರ್​ 4ರಂದು ಉದ್ಯಮಿ ಸೋಹೈಲ್​ ಕಠೂರಿಯಾ ಅವರನ್ನು ಮದುವೆಯಾದರು. ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡು ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಿತು. ಹನ್ಸಿಕಾ ಅವರು ತಮ್ಮ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯನ್ನೇ ವರಿಸಿದ್ದಾರೆ. ರಿಂಕಿ ಮತ್ತು ಸೋಹೈಲ್​ ಮದುವೆ 2016ರಲ್ಲಿ ಗೋವಾದಲ್ಲಿ ನಡೆದಿತ್ತು. ಈ ವೇಳೆ ಹನ್ಸಿಕಾ ಸಹ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ, ಹನ್ಸಿಕಾರನ್ನು ಟ್ರೋಲ್​ ಸಹ ಮಾಡಿದ್ದರು. ರಿಂಕಿಯಿಂದ ದೂರವಾದ ಬಳಿಕ ಸೋಹೈಲ್​ ಮತ್ತು ಹನ್ಸಿಕಾ ಹತ್ತಿರವಾಗಿ ಇದೀಗ ಮದುವೆ ಆಗಿದ್ದಾರೆ. ಇನ್ನೂ ಹನ್ಸಿಕಾ ಮೋಟ್ವಾನಿ ಮತ್ತು ಸೋಹೈಲ್​ ಕಠೂರಿಯಾ ಇಬ್ಬರು ಬಿಜಿನೆಸ್​ ಪಾರ್ಟ್ನರ್ ಸಹ ಹೌದು. (ಏಜೆನ್ಸೀಸ್)

  ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

  ಸ್ನೇಹಿತೆಯ ಮಾಜಿ ಗಂಡನನ್ನೇ ಮದುವೆಯಾಗುತ್ತಿದ್ದಾರಾ ಹನ್ಸಿಕಾ?

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts