More

    ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

    ನವದೆಹಲಿ: ನಟಿ ಹನ್ಸಿಕಾ ಮೋಟ್ವಾನಿಯ ರಿಯಾಲಿಟಿ ಶೋ “ಹನ್ಸಿಕಾ ಲವ್ ಶಾದಿ ಡ್ರಾಮಾ” ಶುಕ್ರವಾರ ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡಿತು. ಈ ಶೋನಲ್ಲಿ ತಮ್ಮ ನಾಲ್ಕು ದಿನಗಳ ಮದುವೆ ಸಂಭ್ರಮಾಚರಣೆಯ ಜೊತೆಗೆ ತಮ್ಮ ಪತಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಹನ್ಸಿಕಾ ಅವರು ಕಳೆದ ಡಿಸೆಂಬರ್​ 4ರಂದು ಉದ್ಯಮಿ ಸೋಹೈಲ್​ ಕಠೂರಿಯಾ ಅವರನ್ನು ಮದುವೆಯಾದರು. ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡು ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಿತು. ಅಂದಹಾಗೆ ಹನ್ಸಿಕಾ ಅವರು ತಮ್ಮ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯನ್ನೇ ವರಿಸಿದ್ದಾರೆ. ರಿಂಕಿ ಮತ್ತು ಸೋಹೈಲ್​ ಮದುವೆ 2016ರಲ್ಲಿ ಗೋವಾದಲ್ಲಿ ನಡೆದಿತ್ತು. ಈ ವೇಳೆ ಹನ್ಸಿಕಾ ಸಹ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ, ಹನ್ಸಿಕಾರನ್ನು ಟ್ರೋಲ್​ ಸಹ ಮಾಡಿದ್ದರು. ರಿಂಕಿಯಿಂದ ದೂರವಾದ ಬಳಿಕ ಸೋಹೈಲ್​ ಮತ್ತು ಹನ್ಸಿಕಾ ಹತ್ತಿರವಾಗಿ ಇದೀಗ ಮದುವೆ ಸಹ ಆಗಿದ್ದಾರೆ. ಇನ್ನೂ ಹನ್ಸಿಕಾ ಮೋಟ್ವಾನಿ ಮತ್ತು ಸೋಹೈಲ್​ ಕಠೂರಿಯಾ ಇಬ್ಬರು ಬಿಜಿನೆಸ್​ ಪಾರ್ಟ್ನರ್ ಸಹ ಹೌದು.

    ಇದೀಗ ಅಸಲಿ ಸಂಗತಿಗೆ ಬರೋಣ ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿರುವ ಹನ್ಸಿಕಾ ಲವ್ ಶಾದಿ ಡ್ರಾಮಾ ಶೋನ ಮೊದಲ ಎಪಿಸೋಡ್​ನಲ್ಲಿ ಹನ್ಸಿಕಾ ಅವರು ತಮ್ಮ ಮದುವೆ ಸುತ್ತ ಎದ್ದಿದ್ದ ಕೆಲವು ವಿವಾದಗಳ ಕುರಿತು ಮಾತನಾಡಿದ್ದಾರೆ. ಸೋಹೈಲ್​ ಮೊದಲ ಮದುವೆ ಮುರಿಯಲು ಹನ್ಸಿಕಾರೇ ಕಾರಣ ಎಂಬ ಆರೋಪಕ್ಕೆ ಖಡಕ್​ ತಿರುಗೇಟನ್ನೂ ನೀಡಿದ್ದಾರೆ.

    ಹನ್ಸಿಕಾಗೂ ಮುನ್ನ ಸೋಹೈಲ್​ ಮಾತನಾಡಿ, ನಾನು ಈ ಹಿಂದೆ ಮದುವೆಯಾಗಿದ್ದೇನೆ ಎಂಬ ಸುದ್ದಿ ತಪ್ಪು ಸಂದರ್ಭದಲ್ಲಿ ಹೊರಬಿದ್ದಿತು. ಹನ್ಸಿಕಾ ಅವರ ಕಾರಣದಿಂದ ಬ್ರೇಕಪ್ ಆಗಿದೆ ಎಂಬಂತೆ ಅದು ಹೊರಬಿದ್ದಿತು. ಇದು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಆರೋಪವನ್ನು ನಿರಾಕರಿಸಿದರು.

    ಹನ್ಸಿಕಾ ಮಾತನಾಡಿ, ಜನರು ನನ್ನ ವಿಲನ್​ ಆಗಿ ಬಿಂಬಿಸಿದರು. ಆ ಸಮಯದಲ್ಲಿ ನಾನು ಆ ವ್ಯಕ್ತಿಯ ಬಗ್ಗೆ ತಿಳಿದಿದ್ದೇನೆ ಎಂದ ಮಾತ್ರಕ್ಕೆ ಅದು ನನ್ನ ತಪ್ಪು ಎಂದು ಅರ್ಥವಲ್ಲ. ಇದರಿಂದ ನನಗೇನು ಆಗಬೇಕೂ ಇಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಇದೆಲ್ಲ ಸಹಜ. ನನ್ನ ಕಡೆ ಬೊಟ್ಟು ಮಾಡುವುದು ಮತ್ತು ನನ್ನನ್ನು ಖಳನಾಯಕಿಯಂತೆ ಬಿಂಬಿಸುವುದು ಸುಲಭ. ಇದು ನಾನು ಸೆಲೆಬ್ರಿಟಿ ಆಗಿದ್ದಕ್ಕೆ ಸಿಗುತ್ತಿರುವ ಬೆಲೆ ಎಂದು ಬೇಸರ ಹೊರಹಾಕಿದರು.

    ಬಳಿಕ ಸೋಹೈಲ್​ ಮಾತನಾಡಿ, ನನ್ನ ಮೊದಲ ಮದುವೆಯು ಅತ್ಯಂತ ಕಡಿಮೆ ಅವಧಿಯಲ್ಲೇ ಅಂತ್ಯವಾಯಿತು. ಮೊದಲ ಪತ್ನಿಯ ಜೊತೆ ನನ್ನ ಸಂಬಂಧ ಮುರಿದು ಬೀಳುವುದಕ್ಕೂ ಹನ್ಸಿಕಾಗೂ ಯಾವುದೇ ಸಂಬಂಧವಿಲ್ಲ. ಹನ್ಸಿಕಾ ಮತ್ತು ನಾನು ಸ್ನೇಹಿತರಾಗಿದ್ದೆವು ಮತ್ತು ನನ್ನ ಮದುವೆಗೆ ಅವರು ಹಾಜರಾಗಿದ್ದರಿಂದ ಅವರ ಫೋಟೋಗಳನ್ನು ನೋಡಿದ ಬಳಿಕ ಈ ಊಹಾಪೋಹ ಹುಟ್ಟಿಕೊಂಡಿತು ಎಂದು ಹೇಳಿದರು.

    ಹನ್ಸಿಕಾ ಅವರ ಲವ್ ಶಾದಿ ಡ್ರಾಮಾ ಪ್ರತಿ ಶುಕ್ರವಾರ ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತದೆ. (ಏಜೆನ್ಸೀಸ್​)

    ರಾಜಸ್ತಾನದ ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹನ್ಸಿಕಾ-ಸೋಹೈಲ್​ ಮದುವೆ

    ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕಾರ ಭರ್ಜರಿ ಡಾನ್ಸ್​! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ವಿಡಿಯೋ

    ಏನು ಆಗಲ್ಲ ಅನ್ನೋ ನಂಬಿಕೆ….ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts