More

    ರಾಜಸ್ತಾನದ ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹನ್ಸಿಕಾ-ಸೋಹೈಲ್​ ಮದುವೆ

    ಜೈಪುರ: ಪುನೀತ್​ ಅಭಿನಯದ ‘ಬಿಂದಾಸ್​’ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್​ ನಟಿ ಹನ್ಸಿಕಾ ಮೊಟ್ವಾನಿ ಮದುವೆ ಉದ್ಯಮಿ ಸೊಹೈಲ್​ ಖಟುರಿಯಾ ಜತೆ ರಾಜಸ್ತಾನದಲ್ಲಿ ಭಾನುವಾರ ರಾತ್ರಿ ನೆರವೇರಿದೆ.

    ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಾಗಿತ್ತು ಎಂದ ಲ್ಯಾಪಿಡ್​ಗೆ ಜ್ಯೂರಿ ಸದಸ್ಯರ ಬೆಂಬಲ

    ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡು ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಾರ ಬದಲಿಸಿಕೊಳ್ಳುವ ಮೂಲಕ ಸತಿ-ಪತಿಗಳಾಗಿದ್ದಾರೆ. ಅದಕ್ಕೂ ಮುನ್ನ ಅಲ್ಲೇ ಸಂಗೀತ ಮತ್ತು ಮೆಹೆಂದಿ ಶಾಸ್ತ್ರಗಳು ನಡೆದಿದ್ದವು.

    ಇದಕ್ಕೂ ಮುನ್ನ ಹನ್ಸಿಕಾ ಮೋಟ್ವಾನಿ, ಸೋಹೈಲ್​ ಕಠೂರಿಯಾ ಎಂಬ ತಮ್ಮ ಬಿಜಿನೆಸ್​ ಪಾರ್ಟ್ನರ್​ ಜತೆಗೆ ಮದುವೆಯಾಗುತ್ತಿರುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಹೀಗಿರುವಾಗಲೇ, ಪ್ಯಾರಿಸ್​ನ ಐಫೆಲ್​ ಟವರ್​ನ ಮುಂಬಾಗದಲ್ಲಿ. ಕ್ಯಾಂಡಲ್​ ಮತ್ತು ಗುಲಾಬಿಗಳನ್ನು ಹೃದಯದ ಆಕಾರದಲ್ಲಿ ಅಲಂಕರಿಸಿ, ಅದರ ನಡುವೆ ನಿಂತ ಹನ್ಸಿಕಾಗೆ ಸೋಹೈಲ್​ ಪ್ರಪೋಸ್​ ಮಾಡಿದ್ದರು. ಇದೇ ಸಂದರ್ಭದಲ್ಲಿ ಹನ್ಸಿಕಾ ಮತ್ತು ಸೋಹೈಲ್​ ಪರಸ್ಪರ ಉಂಗುರಗಳನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಇದನ್ನೂ ಓದಿ: ವಿಜಯಾನಂದ ಎಂಬ ಸುಂದರ ಪ್ರಯಾಣ: ಲಿವಿಂಗ್ ಲೆಜೆಂಡ್ ಪಾತ್ರ ಮಾಡಿದ ಖುಷಿಯಲ್ಲಿ ಭರತ್

    ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯೇ ಈ ಸೋಹೈಲ್​. 2016ರಲ್ಲಿ ಗೋವಾದಲ್ಲಿ ಮದುವೆಯಾಗಿದ್ದ ರಿಂಕಿ ಮತ್ತು ಸೋಹೈಲ್​ ಒಂದು ಹಂತದಲ್ಲಿ ದೂರವಾಗಿದ್ದಾರೆ. ರಿಂಕಿಯಿಂದ ದೂರವಾದ ಸೋಹೈಲ್​, ಈಗ ಹನ್ಸಿಕಾ ಅವರನ್ನು ಎರಡನೆಯ ಮದುವೆಯಾಗಿದ್ದಾರೆ.

    180 ಆಯ್ತು, ಈ ವರ್ಷ 200ರ ಕ್ಲಬ್​ ಸೇರುತ್ತದಾ ಕನ್ನಡ ಚಿತ್ರರಂಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts