ಬೆಂಗಳೂರು: ದೊಡ್ಡನೆ ಕುಡಿ ಯುವರಾಜ್ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದರ ನಡುವೆಯೇ ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಪುತ್ರ ವಿನಯ್ ಸೈಲೆಂಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋಗಳು ವೈರಲ್ ಆಗಿವೆ.
ರಾಜ್ಯಾದ್ಯಂತ ಈಗಾಗಲೇ ಯುವ ರಾಜ್ಕುಮಾರ್ ಡಿವೋರ್ಸ್ ವಿಚಾರ ವ್ಯಾಪಕವಾಗಿ ಸದ್ದು ಮಾಡುತ್ತಿದ್ದು, ಇದರ ನಡುವೆಯೇ ವಿನಯ್ ರಾಜ್ಕುಮಾರ್ ಮದುವೆ ಸುದ್ದಿ ಕೂಡ ಸೌಂಡ್ ಮಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ನಟಿಯೊಬ್ಬರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದು ವದಂತಿಗೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಹಣ ಮಾಡಲೆಂದೇ ವಿರಾಟ್ ಒತ್ತಡದ ಪರಿಸ್ಥಿತಿಯಲ್ಲಿ ಆಡುತ್ತಾನೆ; ಶಾಕಿಂಗ್ ಹೇಳಿಕೆ ಕೊಟ್ಟ ಪಾಕ್ ಮಾಜಿ ವೇಗಿ
ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮ ಕಥೆ ಚಿತ್ರವು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಪಡೆದಿತ್ತು. ವಿನಯ್ ರಾಜ್ಕುಮಾರ್ಗೆ ಜೋಡಿಯಾಗಿ ಬಹುಭಾಷಾ ಸ್ವಾದಿಷ್ಠ ಕೃಷ್ಣನ್ ನಟಿಸಿದ್ದರು. ಇವರ ಜೋಡಿ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ವಿನಯ್ ಹಾಗೂ ಸ್ವಾದಿಷ್ಟ ಮದುವೆ ಆಗೋ ದೃಶ್ಯ ಬರುತ್ತದೆ. ಆ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಟೋ ಇದೀಗ ವೈರಲ್ ಆಗಿದ್ದು, ವಿನಯ್ ಮದುವೆಯಾಗಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುವಂತೆ ಮಾಡಿದೆ.
ಸದ್ಯಕ್ಕೆ ವಿನಯ್ ರಾಜ್ ಕುಮಾರ್ ಮತ್ತು ಸ್ವಾತಿಷ್ಠಾ ಕೃಷ್ಣನ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ನಟಿ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದು, ಅಯ್ಯೋ.. ನಾನು ನನ್ನ ಪೋಸ್ಟ್‌ನಲ್ಲಿಯೇ ಬಹಳ ಕ್ಲಿಯರ್ ಆಗಿ ಬರೆದಿದ್ದೇನೆ. ಇದು ಬಿಹೈಂಡ್ ದ ಸೀನ್ಸಸ್ ಅಂತಾ.. ಪ್ಲೀಸ್ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಫೋಟೋ ಇಷ್ಟು ದೊಡ್ಡ ಬಿರುಗಾಳಿ ಎಬ್ಬಿಸುತ್ತದೆ ಎಂದು ಯಾರು ಊಹಿಸಿರಲಿಲ್ಲ.