ಪೊಲೀಸರ ಕೈಯಲ್ಲಿ ಆಗದೇ ಇರುವ ಕೆಲಸವನ್ನು ಕ್ಷಣಾರ್ಧದಲ್ಲೇ ಮಾಡಿ ತೋರಿಸಿದ ಎಮ್ಮೆ; ಅಷ್ಟಕ್ಕೂ ನಡೆದಿದ್ದೇನು?

Buffalo

ಲಖನೌ: ವಿಚಿತ್ರವಾದ ಘಟನೆಯೊಂದರಲ್ಲಿ ಎಮ್ಮೆಯೊಂದು ಪೊಲೀಸರ ಕೈಯಲ್ಲಿ ಸಾಧ್ಯವಾಗದೆ ಇರುವ ಕೆಲಸವನ್ನು ಮಾಡಿ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಅಷ್ಟಕ್ಕೂ ಪೊಲೀಸರ ಕೈಯಲ್ಲಿ ಸಾಧ್ಯವಾಗದೆ ಇರುವ ಕೆಲಸವನ್ನು ಮಾಡಿದ್ದಾದರು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಪ್ರತಾಪ್​ಗಢದ ಮಹೇಶ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಎಂಬುವವರಿಗೆ ಸೇರಿದ ಎಮ್ಮೆ ಕೆಲ ದಿನಗಳಿಂದ ಕಾಣೆಯಾಗಿತ್ತು. ಆಹಾರ ಅರಸುತ್ತ ಪುರೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಹೋಗಿದ್ದು, ಅಲ್ಲಿ ಅದನ್ನು ಹನುಮಾನ್​ ಸರೋಜ್​ ಎಂಬಾತ ತನ್ನ ಮನೆಯಲ್ಲಿ ಕಟ್ಟಿಹಾಕಿಕೊಂಡಿದ್ದಾನೆ.

ಸತತವಾಗಿ ಹುಡುಕಾಡಿದ ಬಳಿಕ ಎಮ್ಮೆ ಪತ್ತೆಯಾಗಿದ್ದು, ಈ ಬಗ್ಗೆ ವಿಚಾರಿಸಿದಾಗ ಹನುಮಾನ್​ ನಂದಲಾಲ್​ ಬಳಿ ಗಲಾಟೆ ಮಾಡಿದ್ದಾನೆ. ಎಮ್ಮೆ ತನಗೆ ಸೇರಿದ್ದು, ಯಾವುದೇ ಕಾರಣಕ್ಕೂ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡ ನಂದಲಾಲ್​ ಪಂಚಾಯತ್​ಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ಪಂಚಾಯತ್​ ಅಧಿಕಾರಿಗಳು ಪ್ರಕರಣವನ್ನು ಮಹೇಶ್​ಗಂಜ್​ ಪೊಲೀಸ್​ ಠಾಣೆಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದಾರೆ.

Buffalo

ಇದನ್ನೂ ಓದಿ: ಹಣ ಮಾಡಲೆಂದೇ ವಿರಾಟ್​ ಒತ್ತಡದ ಪರಿಸ್ಥಿತಿಯಲ್ಲಿ ಆಡುತ್ತಾನೆ; ಶಾಕಿಂಗ್​ ಹೇಳಿಕೆ ಕೊಟ್ಟ ಪಾಕ್​ ಮಾಜಿ ವೇಗಿ

ಪ್ರಕರಣದ ವಿಚಾರಣೆ ನಡೆಸಿದ ಮಹೇಶ್​ಗಂಜ್​ ಪೊಲೀಸ್​ ಠಾಣಾಧಿಕಾರಿ ಶ್ರವಣ್​ ಕುಮಾರ್​ ಸಿಂಗ್​ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಇದು ಇತ್ಯರ್ರಥವಾಗುವುದಿಲ್ಲ ಎಂದು ತಿಳಿದು ಎಮ್ಮೆಗೆ ತೀರ್ಪು ನೀಡುವಂತೆ ಸೂಚಿಸಿದರು. ಅದು ಹೇಗೆ ಅಂದರೆ ನಂದಲಾಲ್​ ಹಾಗೂ ಹನುಮಾನ್​ ಸರೋಜ್​ನನ್ನು ತಮ್ಮ ತಮ್ಮ ಗ್ರಾಮಗಳ ರಸ್ತೆಯ ಮುಂಭಾಗ ನಿಲ್ಲುವಂತೆ ಸೂಚಿಸಿದರು. ಬಳಿಕ ಎಮ್ಮೆ ಯಾರನ್ನು ಹಿಂಬಾಲಿಸುತ್ತದೆ ಅವರೇ ಅದರ ನಿಜವಾದ ಮಾಲೀಕರು ಎಂದು ತಿಳಿಯುತ್ತದೆ ಎಂದು ಹೇಳಿದರು.

ಅದರಂತೆ ಎಮ್ಮೆ ನಂದಲಾಲ್​ನನ್ನು ಹಿಂಬಾಲಿಸಲು ಶುರು ಮಾಡಿದ್ದು, ಬಳಿಕ ಎಮ್ಮೆಯನ್ನು ಪೊಲೀಸರು ಅದರ ಮಾಲೀಕನಿಗೆ ಒಪ್ಪಿಸಿದ್ದಾರೆ. ಬೇರೆಯವರ ಎಮ್ಮೆಯನ್ನು ತನದು ಎಂದು ಗಲಾಟೆ ಮಾಡಿದ ಹನುಮಾನ್​ ಸರೋಜ್​ಗೆ ಪೊಲೀಸರು ಹಾಗೂ ಗ್ರಾಮಸ್ಥರು ಛೀಮಾರಿ ಹಾಕಿದ್ದು, ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಪೊಲೀಸರ ಕೈಯಲ್ಲಿ ಸಾಧ್ಯವಾಗದ ಕೆಲಸವನ್ನು ಎಮ್ಮೆಯೊಂದು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…