ಲೀಟರ್​ಗೆ 2 ರೂ. ಕಡಿತಗೊಳಿಸಿ ಹಾಲು ಉತ್ಪಾದಕರಿಗೆ ಬಿಗ್​ ಶಾಕ್​ ನೀಡಿದ ಕೋಚಿಮುಲ್​

Kochimul
Published on

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ಶಾಕ್​ ನೀಡಿದ್ದ ಕೆಎಂಎಫ್​, ಇದೀಗ ರೈತರಿಗೆ ಶಾಕ್​ ನೀಡಲು ಮುಂದಾಗಿದೆ. ಸದಾ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರಿಗೆ ಇದೀಗ ಕೋಲಾರ-ಚಿಕ್ಕಬಳ್ಳಾಪುರ ಹಾಲೂ ಒಕ್ಕೂಟ (ಕೋಚಿಮುಲ್​) ಪ್ರತಿ ಲೀಟರ್​ಗೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ(ಜು.05) ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ.ಈ ಮೊದಲು ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿತ್ತು, ಆದರೆ, ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂ ನೀಡಲು ಆದೇಶಿಸಿದೆ. 

ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇತ್ತೀಚಿಗಷ್ಟೇ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವ ಮೂಲಕ ಕೆಎಂಎಫ್​ ಜನರಿಗೆ ಶಾಕ್​ ನೀಡಿತ್ತು. ಇದೀಗ ಕೋಚಿಮುಲ್​ ದರವನ್ನು ಕಡಿತಗೊಳಿಸುವ ಮೂಲಕ ಹಾಲು ಉತ್ಪಾದಕರಿಗೆ ಶಾಕ್​ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net