ಯಾರಿಗೂ ಹೇಳಬೇಡ, ಬೇಗ ಬಾ…. ತನ್ನ ಮದುವೆಗೆ ಎಲ್ಲರ ಕಣ್ತಪ್ಪಿಸಿ ಬರುವಂತೆ ಧೋನಿ ಹೇಳಿದ್ಯಾರಿಗೆ ಗೊತ್ತೇ?

WhatsApp Image 2024-03-23 at 5.27.54 PM
Published on

ನವದೆಹಲಿ: ಕ್ರಿಕೆಟ್​ ಜಗತ್ತಿನ ಅಚ್ಚುಮೆಚ್ಚಿನ ಕ್ಯಾಪ್ಟನ್​, ಸ್ಟಾರ್ ಆಟಗಾರ ಎಂದರೆ ಅದು ಬೇರಾರು ಅಲ್ಲ, ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್​ ದಿಗ್ಗಜ ಮಹೇಂದ್ರ ಸಿಂಗ್ ಧೋನಿ. ಧೋನಿ ಹೆಸರು ಕೇಳಿದೊಡನೆ ಅದೇನೋ ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಹೊಸ ಹುರುಪು, ಎಲ್ಲಿಲ್ಲದ ಸಂತಸ. ಕಾರಣ, ಈ ವ್ಯಕ್ತಿಯ ಆಟದ ವೈಖರಿ, ಕ್ಯಾಪ್ಟನ್ ಆಗಿ ತಂಡವನ್ನು, ತಂಡದ ಸಹ ಆಟಗಾರರನ್ನು ಮುನ್ನಡೆಸಿದ ರೀತಿ. ಮಾತಿನ ದಾಟಿ, ವೇಗವಾಗಿ ಚಿಂತಿಸುವ ಶಕ್ತಿ, ಚಾಣಕ್ಷತನ ಇವೆಲ್ಲವೂ ಮಾಹಿ ಅವರನ್ನು ನೆನಪಿಸುತ್ತದೆ.


2011ರಲ್ಲಿ ವಿಶ್ವಕಪ್​ ಗೆಲ್ಲಿಸಿಕೊಟ್ಟ 'ಕ್ಯಾಪ್ಟನ್ ಕೂಲ್'​ ಮಹೇಂದ್ರ ಸಿಂಗ್ ಧೋನಿ 28 ವರ್ಷಗಳ ಬಳಿಕ ಟೀಮ್​ ಇಂಡಿಯಾ ಹಾಗೂ ಭಾರತೀಯರ ಕನಸನ್ನು ಈಡೇರಿಸಿದರು. ಮಾಹಿ ಟ್ರೋಫಿ ಗೆಲ್ಲುವ ಒಂದು ವರ್ಷದ ಹಿಂದೆ ಅಂದ್ರೆ 2010ರಲ್ಲಿ ಸಾಕ್ಷಿ ಅವರನ್ನು ಪ್ರೀತಿಸಿ, ಮದುವೆಯಾದ ಕ್ಷಣವೇ ರೋಚಕ! ಹೌದು, ಸಾಕ್ಷಿಯೊಂದಿಗೆ ಇದ್ದ ಪ್ರೇಮವನ್ನು ಎಲ್ಲಿಯೂ ಬಹಿರಂಗಪಡಿಸದ ಧೋನಿ, ಕಡೆಗೂ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಂಡರು.

ತದನಂತರ ಇಬ್ಬರ ಮನೆಯವರು ಈ ಮದುವೆಗೆ ಒಪ್ಪಿ, ಜುಲೈ 4, 2010ರಂದು ರಾಂಚಿಯ ಡೆಹ್ರಾಡೂನ್​ನಲ್ಲಿ ಧೋನಿ-ಸಾಕ್ಷಿ ವಿವಾಹ ಸಮಾರಂಭ ಏರ್ಪಡಿಸಿದರು. ಎಲ್ಲರೂ ನಿರೀಕ್ಷಿಸಿದಂತೆ ಕ್ಯಾಪ್ಟನ್​ ಕೂಲ್​ ಮದುವೆ ಅದ್ದೂರಿಯಾಗಿ ನಡೆಯಲಿಲ್ಲ. ಯಾಕಂದ್ರೆ, ಈ ಮದುವೆಗೆ ದೊಡ್ಡ ದೊಡ್ಡ ಗಣ್ಯರು, ರಾಜಕೀಯ ವ್ಯಕ್ತಿಗಳಿಗೆ ಆಹ್ವಾನವಿರಲಿಲ್ಲ. ಕೇವಲ ತಮ್ಮ ಅತ್ಯಾಪ್ತರು, ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಕರೆಯಲಾಗಿತ್ತು.

ಟೀಮ್​ ಇಂಡಿಯಾದ ಆಟಗಾರರಿಗೂ ಆಹ್ವಾನ ನೀಡದ ಧೋನಿ, ತಮ್ಮ ಆಪ್ತಸ್ನೇಹಿತ ಸುರೇಶ್​ ರೈನಾ ಅವರಿಗೆ ದಿಢೀರ್​ ಕರೆ ಮಾಡಿ ಮದುವೆಗೆ ಬರುವಂತೆ ಹೇಳಿದ್ದರು. ಅಂದು ಆ ಘಟನೆ ಹೇಗಿತ್ತು ಎಂಬುದುನ್ನು ವಿವರಿಸಿದ ರೈನಾ, "ಅವತ್ತು ಮಾಹಿ ನನಗೆ ಕಾಲ್ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ರು. ಅದಕ್ಕೆ ನಾನು ಲಕ್ನೋದಲ್ಲಿದದ್ದೇನೆ ಎಂದೆ. ನಾನು ಡೆಹ್ರಾಡೂನ್​ನಲ್ಲಿ ಸಾಕ್ಷಿಯ ಜತೆ ಮದುವೆಯಾಗ್ತಿದ್ದೀನಿ. ತಕ್ಷಣವೇ ಯಾರಿಗೂ ಹೇಳದೆ, ಹೊರಟು ಬಾ" ಎಂದರು.

"ನಿನಗಾಗಿ ಕಾಯ್ತಿದ್ದೀನಿ, ಬೇಗ ಬಾ ಎಂದು ಹೇಳಿದರು. ಕೂಡಲೇ ಸಾಧಾರಣ ಬಟ್ಟೆಯಲ್ಲೇ ಮದುವೆಗೆ ಹೋದೆ. ಆಗ ಮಾಹಿ ಕೊಟ್ಟ ಡ್ರೆಸ್​ ಅನ್ನು ಧರಿಸಿ, ಅವರಿಬ್ಬರ ವಿವಾಹದಲ್ಲಿ ಪಾಲ್ಗೊಂಡೆ" ಎಂದು ಸುರೇಶ್​ ರೈನಾ ಧೋನಿ ಅವರ ಮದುವೆ ಸಮಯದಲ್ಲಿ ಆದ ಅನುಭವವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net