More

    500ರಿಂದ 1 ರೂಪಾಯಿಗೆ ಕುಸಿದಿದ್ದ ರಿಲಯನ್ಸ್​ ಕಂಪನಿ ಷೇರು: ಈಗ 7 ದಿನಗಳಲ್ಲಿ ಬೆಲೆ 30% ಹೆಚ್ಚಳವಾಗಿದ್ದೇಕೆ?

    ಮುಂಬೈ: ಕೆಲ ದಿನಗಳಿಂದ ಷೇರುಪೇಟೆಯಲ್ಲಿ ನನೆಗುದಿಗೆ ಬಿದ್ದಿದ್ದ ಅನಿಲ್ ಅಂಬಾನಿ ಕಂಪನಿ ರಿಲಯನ್ಸ್ ಪವರ್ ಷೇರುಗಳು ಹೊಸ ಚೈತನ್ಯ ಪಡೆದಿವೆ.

    ಕಂಪನಿಯ ಷೇರುಗಳ ಬೆಲೆ ಮಾರ್ಚ್ 13, 2024 ರಂದು ಅಂದಾಜು 20 ರೂ. ಇತ್ತು. ಆದರೆ, ಶುಕ್ರವಾರ ಮಾರುಕಟ್ಟೆಯ ಮುಕ್ತಾಯದ ವೇಳೆಗೆ ಬಿಎಸ್‌ಇಯಲ್ಲಿ ಶೇ. 5ಕ್ಕೂ ಹೆಚ್ಚು ಏರಿಕೆಯೊಂದಿಗೆ 26.27 ರೂ. ತಲುಪಿವೆ. ಕಳೆದ ಕೆಲ ದಿನಗಳಿಂದ ಈ ಷೇರುಗಳು ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿವೆ.

    7 ದಿನಗಳಲ್ಲಿ ಬೆಲೆ 30% ಹೆಚ್ಚಳ:

    ಕಳೆದ 7 ವಹಿವಾಟು ಅವಧಿಗಳಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಪವರ್ ಷೇರು ಬೆಲೆ ಶೇ.30ರಷ್ಟು ಏರಿಕೆಯಾಗಿದೆ. ಈ ಪೈಕಿ 5 ದಿನಗಳ ಕಾಲ ಈ ಷೇರು ಶೇಕಡಾ 5 ರ ಏರಿಕೆಯೊಂದಿಗೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿವೆ.

    ಈ ಹೆಚ್ಚಳಕ್ಕೆ ಕಾರಣವೇನು?:

    ರಿಲಯನ್ಸ್ ಪವರ್ ಷೇರುಗಳ ಏರಿಕೆಯ ಹಿಂದಿನ ಕಾರಣ ಒಂದು ಪ್ರಮುಖ ಸುದ್ದಿ ಎಂದು ಷೇರು ಮಾರುಕಟ್ಟೆಗೆ ಸಂಬಂಧಿಸಿದ ತಜ್ಞರು ನಂಬಿದ್ದಾರೆ. ಈ ವರದಿಗಳ ಪ್ರಕಾರ, ಅನಿಲ್ ಅಂಬಾನಿ ಅವರ ನಷ್ಟದಲ್ಲಿದ್ದ ಈ ಕಂಪನಿಯು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕ್‌ಗಳ ಬಾಕಿ ಸಾಲದ ಹಣವನ್ನು ಪಾವತಿಸಿದೆ. ಐಡಿಬಿಐ ಬ್ಯಾಂಕ್‌ನಿಂದ ಪಡೆದ ದುಡಿಯುವ ಬಂಡವಾಳ ಸಾಲ ಮಾತ್ರ ಉಳಿದಿದೆ ಎಂದು ವರದಿಗಳು ಹೇಳುತ್ತವೆ.

    ರಿಲಯನ್ಸ್ ಪವರ್‌ನ ಷೇರುಗಳನ್ನು ಮೇಲ್ವಿಚಾರಣೆ ಮಾಡುವ ತಜ್ಞರ ಪ್ರಕಾರ, ಪ್ರಸ್ತುತ ಷೇರುಗಳು ಪ್ರತಿ ಷೇರಿಗೆ 30 ರೂ. ಮಟ್ಟದಲ್ಲಿ ಅಡಚಣೆ ಎದುರಿಸುತ್ತಿವೆ. ಒಂದು ವೇಳೆ ಈ ಮಟ್ಟ ದಾಟುವಲ್ಲಿ ಯಶಸ್ವಿಯಾದರೆ ಇದರ ಬೆಲೆ 34 ರೂ.ಗೆ ತಲುಪಬಹುದು ಎಂದು ತಜ್ಞರು ಹೇಳುತ್ತಾರೆ.

     

    ರೂ. 80ರ ಐಪಿಒ ಷೇರಿಗೆ ಗ್ರೇ ಮಾರ್ಕೆಟ್​ನಲ್ಲಿ ರೂ 40 ಪ್ರೀಮಿಯಂ: ಹೂಡಿಕೆ ಮಾಡಿ ಲಾಭ ಗಳಿಸಲು ಏ. 4ರವರೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts