More

    ಬಿಜೆಪಿಗೆ ದೇಣಿಗೆ ನೀಡಲು ರೂ 140 ಕೋಟಿ ಚುನಾವಣಾ ಬಾಂಡ್ ಖರೀದಿಸಿದ ನಂತರ ಕಂಪನಿಗೆ ಮುಂಬೈನಲ್ಲಿ ಸಿಕ್ಕಿತು ರೂ 14,400 ಕೋಟಿ ಯೋಜನೆಯ ಗುತ್ತಿಗೆ

    ಮುಂಬೈ: ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ 584 ಕೋಟಿ ರೂಪಾಯಿ ದೇಣಿಗೆ ನೀಡಿದ ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕುರಿತಂತೆ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಮುಂಬೈನಲ್ಲಿ 14,400 ಕೋಟಿ ರೂಪಾಯಿಗಳ ಸುರಂಗ ಯೋಜನೆಯನ್ನು ಗುತ್ತಿಗೆಯನ್ನು ಈ ಕಂಪನಿ ಪಡೆದುಕೊಂಡಿತ್ತು. ಆದರೆ, ಇದಕ್ಕೂ ಒಂದು ತಿಂಗಳು ಮೊದಲು ಬಿಜೆಪಿಗೆ ದೇಣಿಗೆ ನೀಡಲು 140 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್​ಗಳನ್ನು ಖರೀದಿಸಿತ್ತು. ಏಪ್ರಿಲ್ 2023 ರಲ್ಲಿ 140 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಈ ಕಂಪನಿ ಖರೀದಿಸಿತ್ತು.

    ಚುನಾವಣಾ ಆಯೋಗ ಬಿಡುಗಡೆ ಮಾಡಿದ ವಿವರಗಳಿಂದ ಈ ಮಾಹಿತಿ ಬಹಿರಂಗವಾಗಿದೆ.

    ಮತ್ತೊಂದು ಯೋಜನೆಯಲ್ಲಿ ಉಂಟಾದ ವಿಳಂಬಕ್ಕಾಗಿ ಕಂಪನಿಯು ಇತ್ತೀಚೆಗೆ ಮುಂಬೈನ ನಾಗರಿಕ ಸಂಸ್ಥೆಗೆ ದಂಡ ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಮುಖ ಚುನಾವಣಾ ಬಾಂಡ್ ಖರೀದಿದಾರರಲ್ಲಿ ಒಂದಾದ ಹೈದರಾಬಾದ್ ಮೂಲದ ಕಂಪನಿ ಮೇಘಾ ಇಂಜಿನಿಯರಿಂಗ್ (MEIL), ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 966 ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಿದೆ. ಇದರಲ್ಲಿ ಶೇಕಡಾ 60ರಷ್ಟು ದೇಣಿಗೆ ಬಿಜೆಪಿಗೆ ಹೋಗಿದೆ.

    2023 ರಲ್ಲಿ, ಕಂಪನಿಯು ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ (SGNP) ಅಡಿಯಲ್ಲಿ ಹಾದುಹೋಗುವ ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯ ಗುತ್ತಿಗೆಯನ್ನು 14,400 ಕೋಟಿ ರೂ. ಒಪ್ಪಂದವನ್ನು ಪಡೆದುಕೊಳ್ಳುವ ಒಂದು ತಿಂಗಳ ಮೊದಲು, 140 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿತ್ತು.

    ಎಸ್‌ಜಿಎನ್‌ಪಿ ಅವಳಿ ಸುರಂಗ ಯೋಜನೆಯು 11.84 ಕಿ.ಮೀ ಉದ್ದವಿದೆ. ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ, ಪೂರ್ಣಗೊಳ್ಳಲು ನಾಲ್ಕು ವರ್ಷಗಳ ಗಡುವನ್ನು ಹೊಂದಿದೆ.

    ಹೆಚ್ಚುವರಿಯಾಗಿ, ಕಂಪನಿಯು ಜಂಟಿ ಉದ್ಯಮದಲ್ಲಿ, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ಬುಲೆಟ್ ರೈಲು ನಿಲ್ದಾಣದ ಗುತ್ತಿಗೆಯನ್ನು ಪಡೆದುಕೊಂಡಿದೆ.

    ಮೂಲಗಳ ಪ್ರಕಾರ, ನಗರದಲ್ಲಿ ಮೂಲಸೌಕರ್ಯ ಯೋಜನೆಯನ್ನು ವಿಳಂಬ ಮಾಡಿದ್ದಕ್ಕಾಗಿ ಮುಂಬೈ ನಾಗರಿಕ ಸಂಸ್ಥೆಯಿಂದ ಕಂಪನಿಗೆ ದಂಡ ವಿಧಿಸಲಾಗಿದೆ. ಅಂದಾಜು 1800 ಕೋಟಿ ರೂಪಾಯಿ ಮೌಲ್ಯದ ರಸ್ತೆ ಕಾಂಕ್ರೀಟೀಕರಣ ಯೋಜನೆಗೆ ಗುತ್ತಿಗೆ ಪಡೆದಿದ್ದು, ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಬಿಎಂಸಿಯಿಂದ ದಂಡ ವಿಧಿಸಲಾಗಿತ್ತು.

    ಮೇಘಾ ಇಂಜಿನಿಯರಿಂಗ್ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (BMC), ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA), ಮತ್ತು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC), ಮತ್ತು ಹಲವಾರು ಕೇಂದ್ರ ಸರ್ಕಾರದ ಎಂಜಿನಿಯರಿಂಗ್ ಯೋಜನೆಗಳಂತಹ ನಾಗರಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ.

    ಬಿಜೆಪಿಯ ಹೊರತಾಗಿ, ಕಂಪನಿಯು ಖರೀದಿಸಿದ ಚುನಾವಣಾ ಬಾಂಡ್‌ಗಳ ಮತ್ತೊಂದು ಗಮನಾರ್ಹ ಭಾಗವು ಭಾರತ್ ರಾಷ್ಟ್ರ ಸಮಿತಿಗೆ (BRS) ಹೋಗಿದೆ. ಬಿಆರ್​ಎಸ್​ಗೆ 195 ಕೋಟಿ ರೂ. ದೇಣಿಗೆ ನೀಡಿದೆ. ಕಂಪನಿಯು ತೆಲಂಗಾಣ ಸರ್ಕಾರದೊಂದಿಗೆ ಹಲವಾರು ಎಂಜಿನಿಯರಿಂಗ್ ಒಪ್ಪಂದಗಳನ್ನು ಹೊಂದಿದೆ.

    ತಮಿಳುನಾಡಿನ ಡಿಎಂಕೆಗೆ ರೂ 85 ಕೋಟಿ, ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ರೂ 37 ಕೋಟಿ, ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ರೂ 28 ಕೋಟಿ ಮತ್ತು ಜನತಾ ದಳ (ಎಸ್) ಗೆ ಚುನಾವಣಾ ಬಾಂಡ್‌ಗಳ ಮೂಲಕ ರೂ 5 ಕೋಟಿ ದೇಣಿಗೆಯನ್ನು ಈ ಕಂಪನಿ ನೀಡಿದೆ. ಕಂಪನಿಯು ಕಾಂಗ್ರೆಸ್‌ಗೆ 18 ಕೋಟಿ ರೂಪಾಯಿ ದೇಣಿಗೆ ನೀಡಿದೆ.

    ಜೈಲಿನ ಒಳಗಿರಲಿ ಹೊರಗಿರಲಿ, ಅಲ್ಲಿಂದಲೇ ಸರ್ಕಾರ ನಡೆಸುತ್ತೇನೆ: 10 ದಿನ ಇಡಿ ಕಸ್ಟಡಿಗೆ ಹೋದ ಕೇಜ್ರಿವಾಲ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts