More

    ಸರ್ಕಾರಿ ವೆಬ್​ಸೈಟ್​ ಹ್ಯಾಕ್​ ಮಾಡಿ ಬಹುಕೋಟಿ ವಂಚನೆ; ಆರೋಪಿ ಅರೆಸ್ಟ್​

    ಬೆಂಗಳೂರು: ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಮತ್ತು ಆದಾಯ ತೆರಿಗೆ ಮರುಪಾವತಿ ವಂಚನೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಐಡಿಯ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಹಿರೀಸಾವೆ ಮೂಲದ ದಿಲಿಪ್​ ರಾಜೇಗೌಡ(32) ಬಿಇ ಪದವೀಧರ ಬಂಧಿತ ಆರೋಪಿ. ಈತನ ವಿರುದ್ದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಯು ಸರ್ಕಾರಿ ವೆಬ್‌ಸೈಟ್/ಪೋರ್ಟಲ್‌ಗಳಿಗೆ ಅಕ್ರಮ ಪ್ರವೇಶ ಪಡೆದು ಅದರಲ್ಲಿದ್ದ ದತ್ತಾಂಶಗಳು ಹಾಗೂ ಮಾಹಿತಿಗಳನ್ನು ಪಡೆದು ವಂಚಿಸುತ್ತಿದ್ದ. ಸರ್ಕಾರಿ ಸೇವಾ ಪೋರ್ಟಲ್ ವ್ಯವಸ್ಥೆಗಳಲ್ಲಿನ ಲೋಪಗಳನ್ನು ದುರುಪಯೋಗಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ಸೇರಬೇಕಾದ ದೊಡ್ಡ ಮೊತ್ತದ ಹಣವನ್ನು ಅಕ್ರಮವಾಗಿ ನಕಲಿ ಬ್ಯಾಂಕ್ ತೆರೆದು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1.41ಕೋಟಿ ರೂ. ವರ್ಗಾವಣೆ

    ಆರೋಪಿಯು ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಮೊತ್ತದ ಮರುಪಾವತಿಗಾಗಿ ಅಸಲು ತೆರಿಗೆದಾರರು ದಾಖಲಿಸಿದ್ದ ಬ್ಯಾಂಕ್ ಖಾತೆಯ ವಿವರಗಳನ್ನು ಮಾರ್ಪಡಿಸಿ ನಂತರ ನಕಲಿ ಕೆ.ವೈ.ಸಿ ದಾಖಲಾತಿಗಳ ಮೂಲಕ ಅಸಲಿ ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಬದಲಾಯಿಸಿ ಒಟ್ಟು 1,41,84,630 ಕೋಟಿ ರೂಪಾಯಿಗಳನ್ನು ನಕಲಿ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡಿದ್ದ.

    ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಕೈಗೊಂಡ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳಾದ ಡಿಟೆಕ್ಟಿವ್ ಇನ್‌ಸ್ಪೆಕ್ಟರ್ ಶಿವಪ್ರಸಾದ್ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಆರ್.ರಾಜೇಶ್ ಹಾಗೂ ಟಿ.ಎನ್.ಚಂದ್ರಹಾಸ್ ಅವರನ್ನೊಳಗೊಂಡ ತನಿಖಾ ತಂಡ ತನಿಖೆ ಕೈಗೊಂಡಿತ್ತು. ತನಿಖಾ ಸಮಯದಲ್ಲಿ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾಗ ಒಬ್ಬ ವ್ಯಕ್ತಿಯೇ ಒಟ್ಟು 6 ಅಪರಾಧಗಳನ್ನು ಎಸಗಿ 3.6 ಕೋಟಿ ರೂಪಾಯಿಗಳ ವಂಚನೆಯನ್ನು ಎಸಗಿರುವುದು ಕಂಡು ಬಂದಿತ್ತು.

    cyber crime

    ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲಿಸರು ಧಾರವಾಡದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಿ ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಹಾಗೂ ಸಾಂಪ್ರದಾಯಿಕ ಸಾಕ್ಷಾೃಧಾರಗಳನ್ನು ಸಂಗ್ರಹಿಸಲಾಗಿದೆ. ತನಿಖೆ ವೇಳೆ ಆರೋಪಿಯು ಹಲವಾರು ಬ್ಯಾಂಕುಗಳಿಂದ ವಾಹನ ಸಾಲ ಪಡೆದು ವಂಚನೆ ಎಸಗಿರುವ ಬಗ್ಗೆ ಹಾಗೂ ಬಜಾಜ್ ಫಿನ್‌ಸರ್ವ್ ಕಂಪನಿಯಿಂದ ಸಾಲ ಪಡೆದು ವಂಚಿಸಿರುವುದು ಕಂಡು ಬಂದಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮಂಗಳೂರಲ್ಲಿ ಗೂಡ್ಸ್​ ರೈಲು ಡಿಕ್ಕಿ ಹೊಡೆದು 17 ಎಮ್ಮೆಗಳು ಮೃತ್ಯು

    ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

    ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್​ ಪೋರ್ಟಲ್‌ನಲ್ಲಿ ಅಸಲಿ ತೆರಿಗೆದಾರನ ಪ್ಯಾನ್ ಖಾತೆಗಳಿಗೆ ಯಾರೋ ಅಪರಿಚಿತರು ಅಕ್ರಮ ಪ್ರವೇಶ ಪಡೆದು, ಅದರಲ್ಲಿನ ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಮಾರ್ಪಡಿಸಿ ವಂಚನೆ ಎಸಗಿರುವ ಬಗ್ಗೆ ವಂಚನೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆಗೆ ಸಿಐಡಿಗೆ ಪ್ರಕರಣ ವರ್ಗಾಯಿಸಿದ್ದರು.

    ಲೋಪ ಸರಿಪಡಿಸುವಂತೆ ಸಲಹೆ

    ಆದಾಯ ತೆರಿಗೆ ಪೋರ್ಟಲ್‌ನ ವ್ಯವಸ್ಥೆಯಲ್ಲಿ ಇರುವ ಲೋಪಗಳ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ಸರಿಪಡಿಸುವಂತೆ ಕೋರಲಾಗಿದೆ.

    ದೇ ರೀತಿ ಆಸ್ತಿ ನೋಂದಣಿ ವಿವರಗಳನ್ನು ಒಳಗೊಂಡಿರುವ ಕಾವೇರಿ ಆಲ್‌ಲೈನ್ ಪೋರ್ಟಲ್ ಅನ್ನು ಸಹ ಆರೋಪಿ ದುರುಪಯೋಗಪಡಿಸಿಕೊಂಡಿದ್ದು, ಈ ಸಂಬಂಧಪಟ್ಟ ಪ್ರಾಧಿಕಾರಕ್ಕೂ ಸಹ ಮಾಹಿತಿ ನೀಡಲಾಗಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts