More

    ಕೈ ತಪ್ಪಿದ ಏಷ್ಯಾಕಪ್​ ಆತಿಥ್ಯ; ವಿಶ್ವಕಪ್​ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ ಪಿಸಿಬಿ ಅಧ್ಯಕ್ಷ

    ಲಾಹೋರ್​: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ವೇಳಾಪಟ್ಟಿ ಬಿಡುಗಡೆಗೂ ಮುನ್ನವೇ ಖ್ಯಾತೆ ತೆಗೆದಿರುವ ಪಾಕಿಸ್ತಾನ ಇದೀಗ ಹೊಸ ಪ್ರಸ್ತಾವನೆ ಒಂದನ್ನು ಮುಂದಿಟ್ಟಿದೆ.

    ಈ ಕುರಿತು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​(PCB) ಅಧ್ಯಕ್ಷ ನಜಮ್​ ಸೇಥಿ ಹೇಳಿಕೆ ನೀಡಿದ್ದು ಏಷ್ಯಾಕಪ್​ ಆತಿಥ್ಯ ಪಾಕಿಸ್ತಾನದ ಕೈ ತಪ್ಪಿ ಹೋದರೆ ನಾವು ಭಾರತದಲ್ಲಿ ನಡೆಯುವ ವಿಶ್ವಕಪ್​ ಅನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.

    ಬಹಿಷ್ಕರಿಸುತ್ತೇವೆ

    2023ರ ಸೆಪ್ಟೆಂಬರ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿದ್ದ ಏಷ್ಯಾಕಪ್​ ಟೂರ್ನಿಯೂ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು ಈ ಬಗ್ಗೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದೆ.

    ಒಂದು ವೇಳೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿರುವ ಏಷ್ಯಾಕಪ್​ ಪಂದ್ಯಾವಳಿಗಳನ್ನು ಸ್ಥಳಾಂತರಿಸಿದ್ದಲ್ಲಿ ನಾವು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

    PCB

    ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ

    ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧದ ಕಾರಣ ಉಭಯ ದೇಶಗಳ ನಡುವೆ ಕಳೆದ ಒಂದು ದಶಕದಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಉಭಯ ದೇಶದ ಕ್ರಿಕೆಟ್​ ತಂಡಗಳು ಐಸಿಸಿ ನಡೆಸುವ ಟೂರ್ನಮೆಂಟ್​ಗಳಲ್ಲಿ ತಟಸ್ಥ ಸ್ಥಳಗಳಲ್ಲಿ ಮಾತ್ರ ಆಡುತ್ತವೆ ಎಂದು ನಜಂ ಸೇಥಿ ಹೇಳಿದ್ದಾರೆ.

    ಭದ್ರತೆಯ ಕಾರಣದಿಂದಾಗಿ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸಲು ನಿರಾಕರಿಸಿದೆ. ಆದರೆ, ನಾವು ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಯುಎಇನಲ್ಲಿ ನಡೆಸುವುದಾಗಿ ಘೋಷಿಸಿರುವುದರ ಹೊರತ್ತಾಗಿಯೂ ಈ ನಿರ್ಧಾರ ಸರಿಯಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಚಿಕಿತ್ಸೆಗಾಗಿ ಬಿಸಿಲಿನಲ್ಲಿ 7ಕಿ.ಮೀ ನಡೆದು ಪ್ರಾಣ ಬಿಟ್ಟ ಗರ್ಭಿಣಿ!

    ಬದಲಿ ತಾಣದಲ್ಲಿ ನಡೆಸಿ

    ಒಂದು ವೇಳೆ ಪಾಕಿಸ್ತಾನದೊಂದಿಗೆ ಭದ್ರತೆಯ ಕಾರಣದಿಂದಾಗಿ ಭಾರತ ಕ್ರಿಕೆಟ್​ ತಂಡ ಆಡಲು ಮುಂದೆ ಬಾರದಿದ್ದರೆ ನಾವು ನಮ್ಮ ತಂಡವನ್ನ ವಿಶ್ವಕಪ್​ ಆಡಲು ಕಳುಹಿಸುವುದಿಲ್ಲ.

    ಭಾರತದಲ್ಲಿ ನಮ್ಮ ಭದ್ರತೆಯ ಹಿತದೃಷ್ಟಯಿಂದ ವಿಶ್ವಕಪ್​ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದೇಶ ಅಥವಾ ಯುಎಇನಲ್ಲಿ ನಡೆಸಿ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಥಿ ಬಿಸಿಸಿಐ ಹಾಗೂ ಐಸಿಸಿಗೆ ಷರತ್ತು ವಿಧಿಸಿದದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts