More

    ದೇಶದ ಕಾವಲುಗಾರನಿಗೆ ಜನರ ಬೆಂಬಲ: ಆರ್.ಅಶೋಕ್ ವಿಶ್ವಾಸ

    ಬೆಂಗಳೂರು: ದೇಶದ ಭವಿಷ್ಯ, ಅಭಿವೃದ್ಧಿಯನ್ನು ನಿರ್ಧರಿಸಿರುವ ಚುನಾವಣೆಯಿದು. ಕಾವಲುಗಾರನ ಕೈಗೆ ದೇಶದ ಆಡಳಿತದ ಚುಕ್ಕಾಣಿ ನೀಡಿದರೆ ಸುರಕ್ಷಿತವೆಂದು ಪ್ರಜ್ಞಾವಂತ, ಬುದ್ಧಿವಂತ ಜನರಿಗೆ ಗೊತ್ತಿದೆ. ಜಾಗತಿಕವಾಗಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಡ್ರವಾಗುವುದಕ್ಕೆ ಬೆಂಬಲಿಸುವ ವಿಶ್ವಾಸವಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

    ಜಾಲಹಳ್ಳಿಯ ಕ್ಲಾರಟ್ ಆಂಗ್ಲಶಾಲೆಯ ಮತಗಟ್ಟೆಯಲ್ಲಿ ಪತ್ನಿ ಪ್ರಮಿಳಾ ಜತೆಗೆ ತಮ್ಮ ಹಕ್ಕು ಚಲಾಯಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಕಳೆದ ಒಂದು ದಶಕದಲ್ಲಿ ದೇಶ ಸಾಧಿಸಿದ ಅಭಿವೃದ್ಧಿಯನ್ನು ಗಮನಿಸಿದ್ದಾರೆ. ಸ್ಥಿರ ಸರ್ಕಾರ ಹಾಗೂ ಸಮರ್ಥ ಆಡಳಿತ ನೀಡುವವರಿಗೆ ತಮ್ಮ ಬೆಂಬಲ ಮುಂದುವರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲವೆಂದರು.

    ಹೆಚ್ಚು ಮತದಾನ ನಿರೀಕ್ಷೆ

    ಮತಗಟ್ಟೆ ಬಳಿ ಬೆಳಗ್ಗೆಯಿಂದಲೇ ಜನರು ಉತ್ಸಾಹದಿಂದ ತಮ್ಮ ಹಕ್ಕು ಸಾಲುಗಟ್ಟಿ ನಿಂತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ. ಆದಷ್ಟು ಬೇಗ ಬಿಸಿಲು ಪ್ರಖರತೆ ಏರಿಕೆಯಾಗುವ ಮುನ್ನವೇ ಜನರು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

    ಅತ್ಯಂತ ಮಹತ್ವದ ಚುನಾವಣೆಯಲ್ಲಿ ಮತದಾನ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ವೈಯಕ್ತಿಕ ಸಮಸ್ಯೆ ಬದಿಗಿಟ್ಟು ಪ್ರಜಾತಂತ್ರ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಈ ಬಾರಿ ಚುನಾವಣೆಯಲ್ಲಿ ದೇಶದ ಉನ್ನತಿ, ವಿಶ್ವಕ್ಕೆ ಭಾರತ ವಿಶ್ವಗುರುವಾಗಬೇಕು ಎಂದು ಸಂಕಲ್ಪ ಮಾಡಿದವರಿಗೆ ಜನರು ಆಶೀರ್ವದಿಸಲಿದ್ದಾರೆ ಎಂದು ಆರ್.ಅಶೋಕ್ ಪುನರುಚ್ಚರಿಸಿದರು.

    ಮಾತಿನ ಚಕಮಕಿ

    ಚಾಮರಾಜಪೇಟೆ ಮೊರಾರ್ಜಿ ದೇಸಾಯಿ ಮತಗಟ್ಟೆಯ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಯಿತು. ಸ್ವಲ್ಪ ಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.

    ಮತಗಟ್ಟೆಯ ಸಮೀಪವೇ ಬಿಜೆಪಿ ಕಾರ್ಯಕರ್ತರು ನಿಂತಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದರೆ, ಬಿಜೆಪಿ ಕಾರ್ಯಕರ್ತರು ವಿರೋಧಿಸಿದರು. ಇದರಿಂದಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಮಧ್ಯಪ್ರವೇಶ ಮಾಡಿದ ಪೊಲೀಸರು ಗುಂಪನ್ನು ಚದುರಿಸಿ, ವಾತಾವರಣ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts