More

    ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು

    ಲಖನೌ: 12ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಂಪ್ಯೂಟರ್​ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಬಂಧಿತ ಆರೋಪಿ ಹೆಸರು ಮೊಹಮ್ಮದ್​ ಅಲಿ ಎಂದು ತಿಳಿದು ಬಂದಿದ್ದು ಘಟನೆಯೂ ಶಹಜಹಾನ್​ಪುರ ಜಿಲ್ಲೆಯ ತಿಲ್ಹಾರ್​​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಕ್ರಮ ಕೈಗೊಳ್ಳದ ಪ್ರಾಂಶುಪಾಲ

    ಈ ಕುರಿತು ಪ್ರತಿಕ್ರಿಯಿಸಿರುವ ತಿಲ್ಹಾರ್​​​ ಪೊಲೀಸ್​ ಠಾಣಾಧಿಕಾರಿ ಪ್ರಿಯಾಂಕ್​ ಜೈನ್ ತಿಲ್ಹಾರ್​​ ಜೂನಿಯರ್​ ಶಾಲೆಯ ಕಂಪ್ಯೂಟರ್​ ಶಿಕ್ಷಕ​ ಮೊಹಮ್ಮದ್​ ಅಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ 12 ಮಂದಿ ವಿದ್ಯಾರ್ಥಿನಿಯರು ದೂರು ನೀಡಿದ್ದರು.

    ಇದರಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದ ಬಾಲಕಿಯರು ಸಹ ಇದ್ದಾರೆ. ತಮ್ಮಗಾದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದರು ಸಹ ಆರೋಪಿ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದು ಬಂದಿತ್ತು.

    harassment

    ಈ ಕುರಿತು ಸಂತ್ರಸ್ತ ಬಾಲಕಿಯರು ತಮ್ಮ ಕುಟುಂಬಸ್ಥರ ಬಳಿ ತಮ್ಮಗಾದ ಕುರಿತು ಹೇಳಿಕೊಂಡಿದ್ದಾರೆ. ಪೋಷಕರು ನೀಡಿದ ದೂರಿನನ್ವಯ ವಿದ್ಯಾರ್ಥಿನಿಯರ ಹಾಗೂ ಇತರೆ ಶಿಕ್ಷಕರ ಹೇಳಿಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮಂಗಳೂರಲ್ಲಿ ಗೂಡ್ಸ್​ ರೈಲು ಡಿಕ್ಕಿ ಹೊಡೆದು 17 ಎಮ್ಮೆಗಳು ಮೃತ್ಯು

    ಪ್ರಾಂಶುಪಾಲ ಅಮಾನತು

    ವಿದ್ಯಾರ್ಥಿನಿಯರು ದೂರು ನೀಡಿದ್ದರು ಸಹ ಪ್ರಾಂಶುಪಾಲ ಹಾಗೂ ಇನ್ನೋರ್ವ ಶಿಕ್ಷಕ ಆರೋಪಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಘಟನೆ ಸಂಬಂಧ ಪ್ರಾಂಶುಪಾಲ ಹಾಗೂ ಇನ್ನೋರ್ವ ಶಿಕ್ಷಕನನ್ನು ವಿಚಾರಣೆ ಮುಗಿಯುವವರೆಗೂ ಅಮಾನತಿನಲ್ಲಿಡುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರಕರಣ ಸಂಬಂಧ ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು ಮುಂದಿನ 15ದಿನದೊಳಗೆ ವರದಿ ನೀಡುವಂತೆ ಸೂಚಿಸಿ ಬಾಲಕಿಯರಿಗೆ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts