ಪದಾಧಿಕಾರಿಗಳ ಹೊಸ ಪಟ್ಟಿಯಲ್ಲಿ ಇಲ್ಲ ಸಿ.ಟಿ. ರವಿ ಹೆಸರು! ಜೆ.ಪಿ. ನಡ್ಡಾ ತಂಡದಿಂದ ಶಾಕ್…

ct ravi bl santosh
Published on

ನವದೆಹಲಿ: ಮುಂದಿನ ವಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಪ್ರತಿಪಕ್ಷ‌ನಾಯಕನ ಆಯ್ಕೆ ನಡೆಯಲಿದ್ದು ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಹೈಕಮಾಂಡ್ ಪಡೆದಿದೆ.

ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಜಾತಿ ಲೆಕ್ಕಾಚಾರದಲ್ಲಿ ಪ್ರತಿಪಕ್ಷ ಹಾಗು ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇದೀಗ ಕೇಂದ್ರ ಬಿಜೆಪಿ ಸಂಘಟನೆಯಲ್ಲೂ ಬಿಜೆಪಿ ವರಿಷ್ಠರು ಬದಲಾವಣೆ ತಂದಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ಹೊಸಬರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭ ಚಿಕ್ಕಮಗಳೂರಿನ ಮಾಜಿ ಶಾಸಕ ಸಿ.ಟಿ. ರವಿ ಹೆಸರನ್ನು ಜೆ.ಪಿ. ನಡ್ಡಾ ಹಾಗೂ ತಂಡ ಕೈ ಬಿಟ್ಟಿದೆ. ಮಹಾರಾಷ್ಟ್ರ, ಗೋವಾ , ತಮಿಳುನಾಡು ಉಸ್ತುವಾರಿಯಾಗಿದ್ದ ಸಿ.ಟಿ. ರವಿ ಇನ್ನು ಮುಂದೆ ಆ ಸ್ಥಾನದಲ್ಲಿ ಮುಂದುವರೆಯುವುದಿಲ್ಲ. ಇದಕ್ಕೆ ಅವರ ಅನಾರೋಗ್ಯ ಕಾರಣವೋ ಅಥವಾ ಚುನಾವಣೆಯಲ್ಲಿ ಸೋತದ್ದು ಕಾರಣವೋ ಅದು ಬಿಜೆಪಿಯ ವರಿಷ್ಟರಿಗಷ್ಟೇ ಗೊತ್ತು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್​ರನ್ನು ಮುಂದುವರಿಸಲಾಗುತ್ತಿದ್ದೆ. ಬಿಜೆಪಿ ಇಡೀ ರಾಷ್ಟ್ರೀಯ ಸಂಘಟನೆಯಲ್ಲಿ ಬಿಎಲ್ ಸಂತೋಷ್ ಬಿಟ್ಟರೆ ಬೇರೆ ಇನ್ಯಾರೂ ಕನ್ನಡಿಗರನ್ನು ಸೇರ್ಪಡೆ ಮಾಡಲಾಗಿಲ್ಲ. ಅವರನ್ನು ರಾಷ್ಟ್ರೀಯ ಸಂಘಟನ್ ಮಹಾಮಂತ್ರಿಯನ್ನಾಗಿ ನೇಮಿಸಲಾಗಿದೆ. ರಾಷ್ಟ್ರೀಯ ಸಹ ಸಂಘಟನ ಮಹಾಮಂತ್ರಿಯನ್ನಾಗಿ ಶ್ರೀ ಶಿವ ಪ್ರಕಾಶ್​ರನ್ನು ನೇಮಿಸಲಾಗಿದೆ.

ಬಿಜೆಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 13 ಜನರನ್ನು ನೇಮಕ ಮಾಡಲಾಗಿದ್ದು ಅವರಲ್ಲಿ ಶಾಸಕರಾದ ವಸುಂಧರಾ ರಾಜೆ ಕೂಡ ಒಬ್ಬರು. ಇನ್ನುಳಿದವರು ಬೇರೆ ಬೇರೆ ರಾಜ್ಯದ ಶಾಸಕರು ಹಾಗೂ ಸಂಸದರಾಗಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 4 ಜನರು ಮಹಿಳೆಯರೇ ಇರುವುದೂ ವಿಶೇಷವಾಗಿದೆ.

ಇನ್ನು ಬಿಜೆಪಿಯ ರಾಷ್ಟ್ರೀಯ ಮಹಾಮಂತ್ರಿ ಸ್ಥಾನದಲ್ಲಿ, ಬಿಜೆಪಿ ಪ್ರಮುಖರಾದ ಅರುಣ್ ಸಿಂಗ್, ವಿನೋದ್ ತಾವಡೆ ಮುಂತಾದವರು ಇದ್ದಾರೆ. ಅದೇ ರೀತಿ 13 ಜನ ರಾಷ್ಟ್ರೀಯ ಸಚಿವರನ್ನು ನೇಮಿಸಲಾಗಿದ್ದು, ಕೋಶಾಧ್ಯಕ್ಷರು ಹಾಗೂ ಸಹ ಕೋಶಾಧ್ಯಕ್ಷರನ್ನು ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net