More

    ಇಡಿ ಇಕ್ಕಳದಲ್ಲಿ ಕವಿತಾ: ಹೈದರಾಬಾದ್​ನಲ್ಲಿ ರಾರಾಜಿಸುತ್ತಿದೆ ಬಿ.ಎಲ್​. ಸಂತೋಷ್​ “ಬೇಕಾಗಿದ್ದಾರೆ” ಪೋಸ್ಟರ್​

    ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರ ಪುತ್ರಿ ಕೆ. ಕವಿತಾ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇಕ್ಕಳದಲ್ಲಿ ಸಿಲುಕಿದ್ದು, ಇಂದು ಎರಡನೇ ಸುತ್ತಿನ ವಿಚಾರಣೆ ಎದುರಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಬಿಜೆಪಿ ವಿರುದ್ಧ ತೆಲಂಗಾಣದ ಆಡಳಿತರೂಢ ಭಾರತ್​ ರಾಷ್ಟ್ರ ಸಮಿತಿ ಪೋಸ್ಟರ್​​ ವಾರ್​ ನಡೆಸಿದೆ.

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಉದ್ದೇಶಿಸಿ ತೆಲಂಗಾಣದಲ್ಲಿ ಪೋಸ್ಟರ್​ ಅಂಟಿಸಲಾಗಿದೆ. ಹೈದರಾಬಾದ್​ನ ಎರಡು ಪ್ರತ್ಯೇಕ ಸ್ಥಳದಲ್ಲಿ ಶಾಸಕರನ್ನು ಖರೀದಿಸುವಲ್ಲಿ ಪರಿಣಿತರಾಗಿರುವ ಬಿ.ಎಲ್​. ಸಂತೋಷ್​ “ಬೇಕಾಗಿದ್ದಾರೆ” ಎಂದು ಬರೆದಿರುವ ಪೋಸ್ಟರ್​ ರಾರಾಜಿಸುತ್ತಿದೆ.

    ಇದನ್ನೂ ಓದಿ: ಹಬ್ಬದ ಸಂಭ್ರಮದ ಮಧ್ಯೆ ಯಾರಿಗೂ ಕೇಳಲಿಲ್ಲ ಅಪ್ರಾಪ್ತೆಯ ಅಳು: ದುರಂತ ಅಂತ್ಯ ಕಂಡ 13ರ ಬಾಲೆ

    ಪೋಸ್ಟರ್​ ವಾರ್​ ಸಂತೋಷ್​ಗೆ ಮಾತ್ರ ಸೀಮಿತವಾಗಿಲ್ಲ. ಪ್ರಧಾನಿ ಮೋದಿ ಅವರ ವಿರುದ್ಧ ಬಿಆರ್​ಎಸ್​ ಆಕ್ರೋಶ ಹೊರಹಾಕಿದೆ. ಬಿಎಲ್​ ಸಂತೋಷ್​ ಅವರನ್ನು ಹುಡುಕಿಕೊಟ್ಟರೆ, ಅದಕ್ಕೆ ಬಹುಮಾನವಾಗಿ ಮೋದಿಯವರ 15,00,000 ರೂ.ಗಳ ಭರವಸೆಯನ್ನು ಈಡೇರಿಸಲಾಗುವುದು ಎಂದು ಕಾಳೆದಿದಿ. ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವ ಮುನ್ನ ಮೋದಿ ನೀಡಿದ್ದ ಭರವಸೆಯನ್ನು ನೆನಪು ಮಾಡಿ ಬಿಆರ್​ಎಸ್​ ಟೀಕಿಸಿದೆ.

    ಕಳೆದ ವಾರವಷ್ಟೇ ಬಿಆರ್​ಎಸ್​, ನಗರದಲ್ಲಿ “ರೈಡ್ ಡಿಟರ್ಜೆಂಟ್ಸ್” ಅನ್ನು ಉಲ್ಲೇಖಿಸುವ ಪೋಸ್ಟರ್‌ಗಳನ್ನು ಹಾಕಿತ್ತು. ಅದರ ಮೂಲಕ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಫೋಟೋಗಳನ್ನು ಅಂಟಿಸಲಾಗಿತ್ತು. ಇಬ್ಬರು ಕೂಡ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗುವ ಮೊದಲು ಇಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದವು ಎಂದು ಪೋಸ್ಟರ್​ನಲ್ಲಿ ಉಲ್ಲೇಖಿಸಲಾಗಿತ್ತು.

    ಇದನ್ನೂ ಓದಿ: ಮನೆ ಮಗನಿಗೆ ವಿಷ ಕೊಡಬೇಡಿ, ಹಾಲು ಕೊಡಿ;  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ 

    ಅಂದಹಾಗೆ ಚಂದ್ರಶೇಖರ್​ ಅವರ ಪುತ್ರಿ ಕವಿತಾ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ನೀಡಿರುವ ಸಮನ್ಸ್‌ ಅನ್ನು ಪ್ರಶ್ನಿಸಿ ಮತ್ತು ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 24 ರಂದು ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. (ಏಜೆನ್ಸೀಸ್​)

    18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಕೇಸ್​ ಏನಾಯ್ತು? ತನಿಖಾಧಿಕಾರಿಗಳಿಗೆ ಹೈಕೋರ್ಟ್​ ಶಾಕ್​!

    ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…

    ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts