More

    18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಕೇಸ್​ ಏನಾಯ್ತು? ತನಿಖಾಧಿಕಾರಿಗಳಿಗೆ ಹೈಕೋರ್ಟ್​ ಶಾಕ್​!

    ಭುವನೇಶ್ವರ್​: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಹೈಕೋರ್ಟ್​ ಮಹತ್ವದ ಸೂಚನೆ ನೀಡಿದೆ. ಇದುವರೆಗು ನಡೆದ ತನಿಖೆಯ ಸಂಪೂರ್ಣ ವರದಿಯನ್ನು ನೀಡುವಂತೆ ಒಡಿಶಾ ಪೊಲೀಸರಿಗೆ ಸೂಚಿಸಿದೆ.

    ಅರ್ಚನಾ ನಾಗ್ ಅವರ ಜಾಮೀನು ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯ ಮೊದಲು ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಆದೇಶಿಸಿದೆ. ಚಾರ್ಜ್ ಶೀಟ್ ಸಲ್ಲಿಸಿದ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆಯೇ ಎಂದು ತಿಳಿಯಲು ಹೈಕೋರ್ಟ್ ಬಯಸಿದೆ.

    ಇದನ್ನು ಓದಿ: ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…

    ಭಾರೀ ಸದ್ದು ಮಾಡಿದ ಪ್ರಕರಣ ಹಳ್ಳ ಹಿಡಿಯುತ್ತಿರುವ ಶಂಕೆ ವ್ಯಕ್ತವಾಗಿದೆ. ಅರ್ಚನಾಳಗೆ ಪ್ರಭಾವಿಗಳ ಸಂಪರ್ಕವಿದೆ. ಒಂದು ವೇಳೆ ಆಕೆ ಶಿಕ್ಷೆಗೆ ಗುರಿಯಾದರೆ ಅನೇಕ ಪ್ರಭಾವಿಗಳ ಬಂಡವಾಳ ಬಯಲಾಗಬಹುದು ಎಂಬ ಆತಂಕ ಜನಪ್ರತಿನಿಧಿಗಳ ಬಳಿ ಇದೆ. ಆಡಳಿತಾರೂಢ ಬಿಜೆಡಿ ನಾಯಕರೇ ಅರ್ಚನಾಳ ಹನಿಟ್ರ್ಯಾಪ್​ ಬಲೆಗೆ ಸಿಲುಕಿರುವುದರಿಂದ ಆಕೆಯ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೇ ಅರ್ಚನಾಳ ಪತಿ ಜಗಬಂಧುಗೆ ನ್ಯಾಯಾಲಯ ಜಾಮೀನು ನೀಡಿದೆ.

    ಈ ಪ್ರಕರಣದ ವಿಚಾರಣೆ ನಿನ್ನೆ (ಮಾ.15) ನ್ಯಾಯಮೂರ್ತಿ ವಿ.ನರಸಿಂಗ್ ಅವರ ಪೀಠದಲ್ಲಿ ನಡೆಯಿತು. ಅರ್ಚನಾ ನಾಗ್ ಪರವಾಗಿ ವಕೀಲ ಪ್ರಭುಸೇನ್ ಬೆಹೆರಾ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ.

    ಯಾರು ಈ ಅರ್ಚನಾ?
    26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗಿದೆ.

    ಇದನ್ನೂ ಓದಿ: ಹಬ್ಬದ ಸಂಭ್ರಮದ ಮಧ್ಯೆ ಯಾರಿಗೂ ಕೇಳಲಿಲ್ಲ ಅಪ್ರಾಪ್ತೆಯ ಅಳು: ದುರಂತ ಅಂತ್ಯ ಕಂಡ 13ರ ಬಾಲೆ

    ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.

    2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ. (ಏಜೆನ್ಸೀಸ್​)

    ಹಣೆಬರಹ ನಿರ್ಧರಿಸಲಿದೆ ಕೈಬರಹ! 18 ಶಾಸಕರನ್ನು ಬಲೆಗೆ ಬೀಳಿಸಿದ ಅರ್ಚನಾ ಕೇಸ್​ನಲ್ಲಿ ಮಹತ್ವದ ಬೆಳವಣಿಗೆ

    18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

    ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಐಷಾರಾಮಿ ಮನೆ ಪ್ರವೇಶಿಸಿದ ಪೊಲೀಸರಿಗೆ ಕಾದಿತ್ತು ಸಾಕಷ್ಟು ಅಚ್ಚರಿಗಳು!

    18 ಶಾಸಕರನ್ನು ಬಲೆಗೆ ಬೀಳಿಸಿದ ಹನಿಟ್ರ್ಯಾಪ್​ ರಾಣಿ ಅರ್ಚನಾ ಕಾಲೇಜಿನಲ್ಲಿ ಹೇಗಿದ್ದಳು ಅಂತಾ ತಿಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts