More

    ಪ್ರಜ್ವಲ್ ವಿದೇಶಕ್ಕೆ ಹಾರುತ್ತಾರೆಂದು ಕೇಂದ್ರಕ್ಕೆ ಕನಸು ಬಿದ್ದಿತ್ತೇ ?

    ಹುಬ್ಬಳ್ಳಿ : ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದೇ ಇರಲು ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮಧ್ಯದ ಒಪ್ಪಂದವೆಂದು ಜನರು ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಪ್ರಜ್ವಲ್ ರೇವಣ್ಣ ಅವರನ್ನು ಓಡಿ ಹೋಗಲೂ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

    ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಆರೋಪ ಮಾಡುತ್ತಿದೆ ಎಂದು ದೂರಿದರು.

    ಎಫ್​ಐಆರ್ ದಾಖಲಾಗುವ ಮುಂಚೆಯೇ ಪ್ರಜ್ವಲ್ ರೇವಣ್ಣ ಓಡಿ ಹೋಗಿದ್ದಾರೆ. ರಾಜ್ಯ ಪೊಲೀಸರು ಅವರ ವಿರುದ್ಧ ತಕ್ಷಣ ಎಫ್​ಐಆರ್ ದಾಖಲಿಸಬೇಕಿತ್ತು. ಆದರೆ, ಪೊಲೀಸರು ಹಾಗೆ ಮಾಡಲಿಲ್ಲ ಎಂದರು.

    ಪ್ರಜ್ವಲ್ ವಿದೇಶಕ್ಕೆ ಹಾರುತ್ತಾರೆಂದು ಕೇಂದ್ರಕ್ಕೆ ಕನಸು ಬೀಳುತ್ತದೆಯೇ ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರ ತನ್ನ ತಪ್ಪನ್ನು ಕೇಂದ್ರದ ಮೇಲೆ ಹಾಕಲು ನೋಡುತ್ತಿದೆ ಎಂದು ದೂರಿದರು.

    ಜೆಡಿಎಸ್ ಸ್ವತಂತ್ರ ರಾಜಕೀಯ ಪಕ್ಷ. ಈಗಾಗಲೇ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಛಾಟಿಸಿದೆ. ಆ ಪಕ್ಷ ಕೈಗೊಂಡಿರುವ ಕ್ರಮಕ್ಕೆ ಬಿಜಿಪಿಯ ವಿರೋಧವಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

    ಇನ್ನು, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಆಗಲೇ ‘ಉಪು್ಪ ತಿಂದವರು ನೀರು ಕುಡಿಯಬೇಕು‘ ಎಂದು ಹೇಳಿದ್ದಾರೆ. ಜೆಡಿಎಸ್ ಆಗಲಿ, ಬಿಜೆಪಿಯಾಗಲಿ ಪ್ರಜ್ವಲ್ ಉಚ್ಛಾಟನೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಿದರು.

    ಪ್ರಜ್ವಲ್ ರೇವಣ್ಣ ತಲೆ ಮರೆಸಿಕೊಳ್ಳಲು ಬಿಜೆಪಿ ಸಹಾಯ ಮಾಡಿದೆ ಎಂಬ ಆರೋಪ ಕಾಂಗ್ರೆಸ್ಸಿನ ಬೇಜವಾಬ್ದಾರಿತನದ್ದು. ಯಾರೇ ಆಗಲಿ ಆರೋಪ ಮಾಡುವಾಗ ಬುದ್ಧಿ, ಜ್ಞಾನ ಇಟ್ಟುಕೊಳ್ಳಬೇಕು. ದುರುದ್ದೇಶದಿಂದ ಕೂಡಿರಬಾರದು ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು. ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಎಂಬ ಕಾರಣಕ್ಕೆ ಪ್ರಕರಣ ಮತ್ತಷ್ಟು ಸೂಕ್ಷ್ಮವಾಗಿದೆ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts