More

    ನಾವ್ಯಾರು ತಾಲಿಬಾನ್​ಗಳಲ್ಲ..ಉರಿಗೌಡ, ನಂಜೇಗೌಡ ವಾಸ್ತವಿಕ ಸತ್ಯ ಮನವರಿಕೆ ಮಾಡಿಕೊಡುತ್ತೇವೆ; ಸಿಟಿ ರವಿ

    ತುಮಕೂರು: ಉರಿಗೌಡ, ನಂಜೇಗೌಡ ಇತಿಹಾಸದ ವಿಚಾರವಾಗಿ ನಾವು ಚರ್ಚೆ ಮುಂದುವರಿಸುತ್ತೇವೆ. ನಾವ್ಯಾರು ತಾಲಿಬಾನ್ ಗಳಲ್ಲ‌. ಪ್ರಜಾಪ್ರಭುತ್ವದ ಪ್ರತಿನಿಧಿಗಳಿಂದ ಚರ್ಚೆಯಾಗಲಿ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಗ್ರಹಿಸಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಸ್ತವವಾಗಿ ಟಿಪ್ಪು ಸುಲ್ತಾನ್ ಸ್ವಾತಂತ್ರ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಅಂತ ಬಿಂಬಿಸಬೇಕಿತ್ತು. ವ್ಯಾಪಾರದ ನೆಪದಲ್ಲಿ ಬಂದಿದ್ದ ಅಂತ ಬ್ರಿಟಿಷರನ್ನ ಚಿತ್ರೀಕರಿಸಿದ್ದೇವೆ. ಹಾಗೆ ಕೂಲಿ ಹಾಗೆ ಬಂದವನು ಮೋಸದಿಂದ ಮೈಸೂರು ಸಂಸ್ಥಾನವನ್ನ ಕಬಳಿಸಿದ ಅಂತ ನಾವು ಎಲ್ಲಿ ಹೇಳಿದ್ದೇವೆ. ಹೈದರಾಲಿ,‌ ಮೈಸೂರಿಗೆ ಕೂಲಿ ಆಳಾಗಿ ಸೆರ್ಕೊಂಡು ಮಹಾರಾಜರಿಗೆ ನಿಷ್ಠವಾದರನ್ನ ಮೋಸದಿಂದ ಕೊಂದ‌ನು.ಮಹಾರಾಣಿ ಲಕ್ಷ್ಮಮ್ಮಣ್ಣಿ ಸೆರೆಮನೆಯಲ್ಲಿಟ್ಟ, ಮೋಸದಿಂದ ಅಧಿಕಾರ ಕಬಳಿಸಿದ. ಶ್ರೀರಂಗಪಟ್ಟಣದಲ್ಲಿ, ದಸರ ಉತ್ಸವವನ್ನ ನಿಲ್ಲಿಸಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ಪತ್ನಿಯನ್ನು ತವರು ಮನೆಗೆ ಕಳಿಸಿ..ಮಗಳ ಕತ್ತು ಹಿಸುಕಿ ಜೀವತೆಗೆದ ತಂದೆ
    ಡೆಮಾಕ್ರಸಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೆ. ಸತ್ಯ ಹೊರಬೇಕು. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ ಸರಿಯಾದ ಸಂಶೋಧನೆ ಆಗದೆ ಇತಿಹಾಸದ ಬಗ್ಗೆ ಚರ್ಚಿಸೋದು ಸೂಕ್ತವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡಿಕೊಡುತ್ತೇವೆ. ಸ್ವಾಮೀಜಿ ಬಳಿ ಖಂಡಿತ ದಾಖಲೆ ತಗೊಂಡು ಹೋಗುತ್ತೇವೆ. ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡಿಕೊಡುತ್ತಿವಿ‌. ಸ್ವಾಮೀಜಿ ಅವರ ಬಗ್ಗೆ ಶ್ರದ್ದೆ ಗೌರವ ನಮಗೆ ಇದೆ ಎಂದಿದ್ದಾರೆ.

    ಇದನ್ನೂ ಓದಿ: ಬಿಸ್ಲೇರಿ ಖರೀದಿಗೆ ‘ಟಾಟಾ’ ಹೇಳಿದ ಟಿಸಿಪಿಎಲ್​; ಭವಿಷ್ಯ ಮಗಳ ಕೈಯಲ್ಲಿ

    ಉರಿಗೌಡ, ನಂಜೇಗೌಡರದು ಇವತ್ತು ನಿನ್ನೆಯಿಂದ ಪ್ರಾಮುಖ್ಯತೆಗೆ ಬಂದಿದ್ದಲ್ಲ. ದಾಖಲೆ ಮುಂದಿಟ್ಟುಕೊಂಡು ಸ್ವಾಮೀಜಿ ಬಳಿ ಚರ್ಚೆ ಮಾಡುತ್ತೇವೆ. ಚುನಾವಣೆ ಇರೋದ್ರಿಂದ ಉರಿಗೌಡ, ನಂಜೇಗೌಡ ವಿಚಾರ ಬೇರೆ ಬೇರೆ ತಿರುವು ಪಡೆಯುತ್ತಿದೆ. ಅದು ಬೇರೆ ಬೇರೆ ತಿರುವು ಪಡೆಯಬಾರದು ಅನ್ನೋ ದೃಷ್ಟಿಯಿಂದ ಹೇಳಿದ್ದಾರೆ.ನಾವು ಅವರ ಮಾತನ್ನ ಗೌರವಸುತ್ತೆವೆಂದಿದ್ದಾರೆ.

    ಆದಿಚುಂಚನಗಿರಿ ಸ್ವಾಮೀಜಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಅಪಮಾನ ಮಾಡಿದ್ದಾರೆ. ಅಗೌರವವಾಗಿ ನಡೆದುಕೊಂಡಿರುವುದರಿಂದ ಆದಿ ಚುಂಚನಗಿರಿ ಸ್ವಾಮೀಜಿಗೆ ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದಿದ್ದಾರೆ.

    ಗದಗ ಜಿಲ್ಲೆಯ ಚೆಕ್ ಪೋಸ್ಟ್​​ನಲ್ಲಿ 4 ಕೆ.ಜಿ ಚಿನ್ನಾಭರಣ ಜಪ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts