More

    ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

    ಬೊಗೊಟಾ: ಜೀವಂತ ಗೂಬೆಯ ತಲೆಯನ್ನು ಕತ್ತರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತೀವ್ರ ಟೀಕೆ ಗುರಿಯಾಗಿದ್ದ ಯುವತಿಯೊಬ್ಬಳು ಇದೀಗ ಗುಂಡೇಟಿಗೆ ಬರ್ಬರ ಹತ್ಯೆಯಾಗಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.

    ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

    ಮಿಲೆಡಿಸ್ ಅಲ್ಡಾನಾ (21) ಮೃತ ಯುವತಿ. ಭಾನುವಾರ ಮಧ್ಯಾಹ್ನ ಕೊಲಂಬಿಯಾದ ಸುಕ್ರೆ ರಾಜ್ಯದ ಕರೊಜಾಲ್​ ಪಟ್ಟಣದಲ್ಲಿರುವ ನಿವಾಸದ ಹೊರಭಾಗದಲ್ಲಿ ಮೋಟರ್​ ಸೈಕಲ್​ ಸವಾರನ ಗುಂಡೇಟಿಗೆ ಅಲ್ಡಾನಾ ಬಲಿಯಾಗಿದ್ದಾಳೆ. ಜೀವಂತ ಗೂಬೆಯ ತಲೆಯನ್ನು ಕತ್ತರಿಸಿ, ಒಂದು ಕೈಯಲ್ಲಿ ರುಂಡ ಹಾಗೂ ಮತ್ತೊಂದು ಕೈಯಲ್ಲಿ ಮುಂಡವನ್ನು ಹಿಡಿದುಕೊಂಡಿದ್ದ ವಿಡಿಯೋವನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾಳು. ಈ ಘಟನೆ ನಡೆದ ಆರು ತಿಂಗಳ ಬಳಿಕ ಅಲ್ಡಾನಾ ಭೀಕರ ಹತ್ಯೆಯಾಗಿದ್ದಾಳೆ.

    ಇದನ್ನೂ ಓದಿ: ಅಪಘಾತಕ್ಕೀಡಾದ ಸಂತ್ರಸ್ತರಿಗೆ ತಕ್ಷಣ ನೆರವಾದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

    ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

    ಕಳೆದ ಭಾನುವಾರ ಮೋಟರ್​ ಬೈಕ್​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಪರಾರಿಯಾಗುವ ಮುನ್ನ ಅಲ್ಡಾನಾ ಮೇಲೆ ಆರು ಬಾರಿ ಗುಂಡಿನ ಮಳೆಗೆರೆದಿದ್ದಾರೆ. ಗಂಭೀರವಾಗಿದ್ದ ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.

    ಇದನ್ನೂ ಓದಿ: ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್​ಗೆ ಗಂಡನ ಪ್ರಾಣವೇ ಹೋಯ್ತು..!

    ಇನ್ನು ಗೂಬೆ ಕೊಂದ ಪ್ರಕರಣದಲ್ಲೂ ಅಲ್ಡಾನಾ ಪೊಲೀಸ್​ ವಿಚಾರಣೆ ಎದುರಿಸುತ್ತಿದ್ದಳು. ಕೊಲಂಬಿಯಾ ಪರಿಸರ ಸಂಸ್ಥೆ ಗೂಬೆ ಕೊಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೂರು ದಾಖಲಿಸಿತ್ತು. ಇದೇ ಪ್ರಕರಣದಡಿಯಲ್ಲಿ ತನಿಖೆಯು ನಡೆಯುತ್ತಿತ್ತು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಅಲ್ಡಾನಾಗೆ ಸಾಕಷ್ಟು ಬೆದರಿಕೆ ಸಂದೇಶಗಳು ಬರುತ್ತಿದ್ದವು. ಆದರೂ ಆಕೆಯ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

    ಅಲ್ಡಾನ ಸಾವಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮೂಕ ಪ್ರಾಣಿಯ ಶಾಪವೇ ಇಂದು ಆಕೆಯ ಬರ್ಬರ ಹತ್ಯೆಗೆ ಕಾರಣವೆಂದು ಪ್ರಾಣಿ ಪ್ರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

    ಟ್ವಿಟರ್​ ಬಳಸಿ 9 ಕೊಲೆ ಮಾಡಿದ್ದ ಈತ! ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​; ಟ್ವಿಟರ್​ ಕಿಲ್ಲರ್​ನ ವಿಚಿತ್ರ ಕಥೆ ಇಲ್ಲಿದೆ…

    ಪೋರ್ನ್​ ವಿಡಿಯೋ ನೋಡುವವರಿಗೆ ಶಾಕ್​ ಕೊಡಲು ತೆರೆಮರೆಯಲ್ಲಿ ನಡೆಯುತ್ತಿದೆ ಪೊಲೀಸರ ಕಸರತ್ತು!

    ಅಮ್ಮನಿಗೆ 118 ಬಾರಿ ಚಾಕು ಇರಿದು ಕೊಂದ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್​ ತರಲು ಹೇಳಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts