ಅಪಘಾತಕ್ಕೀಡಾದ ಸಂತ್ರಸ್ತರಿಗೆ ತಕ್ಷಣ ನೆರವಾದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

H13 Accident 1
ಸಂಗ್ರಹ ಚಿತ್ರ
Published on

ಡೆಹ್ರಾಡೂನ್​: ಯಾರಿಗಾದರೂ ಅಪಘಾತವಾದಾಗ ಬಹುತೇಕರು ಸಹಾಯ ಮಾಡಲು ಹಿಂಜರಿಯುತ್ತಾರೆ. ಎಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿ ಕೋರ್ಟು-ಕಚೇರಿ ಅಲೆಯಬೇಕಾಗುತ್ತದೋ ಎಂಬ ಭಯವೂ ಇದಕ್ಕೆ ಕಾರಣ. ಈ ಕುರಿತು ಸಾಕಷ್ಟು ಅರಿವು ಮೂಡಿಸಿದರೂ ಬಹುತೇಕರ ಮನಸ್ಸಿನಲ್ಲಿ ಅದೇ ಭಾವನೆ ಉಳಿದಿದೆ.

ಹೀಗಾಗಿ ಜನರಲ್ಲಿನ ಭಯದ ವಾತಾವರಣವನ್ನು ಹೋಗಲಾಡಿಸಿ, ತಕ್ಷಣ ಅಪಘಾತದ ಸಂತ್ರಸ್ತರ ನೆರವಿಗೆ ಧಾವಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತರಖಂಡ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಪಘಾತವಾದಾಗ ಸಂತ್ರಸ್ತರಿಗೆ ತಕ್ಷಣ ನೆರವಾಗುವ ವ್ಯಕ್ತಿಗಳಿಗೆ ಉತ್ತರಖಂಡ ಸರ್ಕಾರ 1 ಲಕ್ಷ ರೂ. ಬಹುಮಾನವನ್ನು ನೀಡಲಿದೆ.

ಈ ಸಂಬಂಧದ ಪ್ರಸ್ತಾವನೆಗೆ ಉತ್ತರಖಂಡ ಸರ್ಕಾರ ಸೋಮವಾರ ಅನುಮೋದನೆಯನ್ನು ನೀಡಿದೆ. ಬಹುಮಾನ ನೀಡುವ ಅಧಿಕಾರನ್ನು ಡಿಜಿಪಿ ಹೊಂದಲಿದ್ದು, ರಸ್ತೆ ಸುರಕ್ಷತಾ ನಿಧಿಯಿಂದ ಹಣವನ್ನು ನೀಡಬಹುದಾಗಿದೆ. ಈ ಬಹುಮಾನದಿಂದ ಅಪಘಾತದ ಸಂತ್ರಸ್ತರಿಗೆ ನೆರವಾಗಲು ಜನರನ್ನು ಉತ್ತೇಜಿಸದಂತಾಗುತ್ತದೆ ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net