More

    ಉತ್ತರ ಪ್ರದೇಶಕ್ಕೆ ಆಮ್​ ಆದ್ಮಿ ಲಗ್ಗೆ- ಮಹತ್ವದ ಘೋಷಣೆ ಮಾಡಿದರು ಕೇಜ್ರಿವಾಲ್​

    ನವದೆಹಲಿ: ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರ ದೃಷ್ಟಿಯೀಗ ಉತ್ತರ ಪ್ರದೇಶದತ್ತ ನೆಟ್ಟಿದೆ. 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ‘2022ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲಿದೆ. ಉತ್ತರ ಪ್ರದೇಶ ಕೂಡ ದೆಹಲಿಯಂತಹ ಕಲ್ಯಾಣ ಮತ್ತು ಸವಲತ್ತುಗಳಿಗೆ ಅರ್ಹವಾಗಿದೆ. ಆದ್ದರಿಂದ ಅಲ್ಲಿಯವರು ವಿನಾಕಾರಣ, ಆರೋಗ್ಯ ಆರೈಕೆ, ಶಿಕ್ಷಣ ಮತ್ತು ಮೂಲ ಸೌಕರ್ಯಗಳಿಗಾಗಿ ದೆಹಲಿಯವರೆಗೆ ಹೋಗಿ ಬರುವುದನ್ನು ತಪ್ಪಿಸುವುದಕ್ಕಾಗಿ ಅಲ್ಲಿಯ ಜನರ ಅನುಕೂಲಕ್ಕಾಗಿ ತಮ್ಮ ಪಕ್ಷ ಅಲ್ಲಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.

    ದೆಹಲಿಯಂಥ ಸೌಲಭ್ಯಗಳು ತಮಗೂ ಅವಶ್ಯಕತೆ ಇದೆ ಎಂದು ನನ್ನ ಬಳಿ ಉತ್ತರ ಪ್ರದೇಶದ ಅನೇಕ ಮಂದಿ ಹೇಳಿದ್ದಾರೆ ಎಂದಿರುವ ಕೇಜ್ರಿವಾಲ್​, ಎಎಪಿ ತನ್ನ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ದೆಹಲಿಯಂತೆಯೇ ಉತ್ತರ ಪ್ರದೇಶವನ್ನೂ ಮಾಡುವುದಾಗಿ ಅವರು ಹೇಳಿದರು.

    ಇದೇ ವೇಳೆ ಭ್ರಷ್ಟಾಚಾರದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಉತ್ತರ ಪ್ರದೇಶದ ಎಲ್ಲ ಪಕ್ಷಗಳು ಭ್ರಷ್ಟಾಚಾರದ ವಿಷಯದಲ್ಲಿ ಪರಸ್ಪರರನ್ನು ಮೀರಿಸಿಹೋಗಿವೆ, ಎಲ್ಲಾ ಪಕ್ಷಗಳೂ ಜನರಿಗೆ ದ್ರೋಹ ಬಗೆಯುತ್ತಿವೆ ಎಂದರು. ಆದ್ದರಿಂದ ತಮ್ಮ ಪಕ್ಷ ಅಲ್ಲಿ ಗೆದ್ದರೆ ಯಾರೂ ಮಾಡದ ಸಾಧನೆ ಮಾಡಿ ತೋರಿಸುವೆ. ಎಲ್ಲಾ ಪಕ್ಷಗಳನ್ನೂ ಜನರು ಮರೆಯುವಂತೆ ಮಾಡುವುದೇ ನನ್ನ ಉದ್ದೇಶ ಎಂದು ಹೇಳಿದರು.

    ಶ್ರೀರಾಮಚಂದ್ರ ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿಸಿದ ಮಾಜಿ ಸಿಎಂ ಅಖಿಲೇಶ್​!

    ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

    ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts