More

    ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ ವಾಹನ ನಿಷೇಧಕ್ಕೆ ಆಗ್ರಹ

    ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ವಾರಾಂತ್ಯದಲ್ಲಿ ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳು ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಟ್ರಾಫಿಕ್ ಜಾಮ್ ಸಾಮಾನ್ಯ. ಸಣ್ಣಪುಟ್ಟ ಅಪಘಾತಗಳು ಸೇರಿದಂತೆ ವಾಹನಗಳು ಪ್ರಪಾತಕ್ಕೆ ಬಿದ್ದ ಸಾಕಷ್ಟು ಉದಾಹರಣೆಗಳು ಇವೆ. ಹೀಗಾಗಿ ಗಿರಿ ಶ್ರೇಣಿಯಲ್ಲಿ ಭಾರಿ ವಾಹನಗಳನ್ನು ನಿಷೇಧಿಸಬೇಕು ಎಂಬ ಒತ್ತಾಯ ಪರಿಸರಾಸಕ್ತರಿಂದ ಕೇಳಿಬರಲಾರಂಭಿಸಿದೆ.

    ಭಾನುವಾರ ದತ್ತಪೀಠ ಹಾಗೂ ಮಾಣಿಕ್ಯಧಾರ ಮಧ್ಯದ ರಸ್ತೆಯಲ್ಲಿ ಬಸ್ ಪ್ರಪಾತಕ್ಕೆ ಉರುಳಿದ ಬೆನ್ನಲ್ಲೇ ಗಿರಿ ಶ್ರೇಣಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕು ಹಾಗೂ ಸ್ಥಳೀಯರ ವಾಹನ ಹೊರತುಪಡಿಸಿ ಉಳಿದ ವಾಹನಗಳಿಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಪರಿಸರಾಸಕ್ತರಿಂದ ಕೇಳಿ ಬರಲಾರಂಭಿಸಿದೆ. ಪ್ರವಾಸಿಗರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಬೆಟ್ಟ ವೀಕ್ಷಣೆ ಸಫಾರಿ ವಾಹನಗಳ ಸಂಚಾರ ಸರ್ಕಾರದಿಂದಲೇ ಆರಂಭಿಸಬೇಕು ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.
    ಶನಿವಾರ, ಭಾನುವಾರ ಚಂದ್ರದ್ರೋಣ ಪರ್ವತ ಶ್ರೇಣಿಯ ಎಲ್ಲಿ ನೋಡಿದರಲ್ಲಿ ಬರಿ ವಾಹನಗಳೇ ಕಾಣಿಸುತ್ತವೆ. ಇದರಿಂದಾಗಿ ಗಿರಿಶ್ರೇಣಿಯಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಜತೆಗೆ ಹುಲಿ ಇತರ ವನ್ಯಜೀವಿಗಳ ಮುಕ್ತ ಸಂಚಾರಕ್ಕೂ ಧಕ್ಕೆಯಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಕೂಡಲೇ ಗಿರಿ ಶ್ರೇಣಿಯಲ್ಲಿ ವಾಹನಗಳ ನಿಷೇಧಿಸಿ ಬೆಟ್ಟ ವೀಕ್ಷಣೆ ಸಫಾರಿ ವಾಹನಗಳ ಸಂಚಾರ ಆರಂಭಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.
    ಸರ್ಕಾರಕ್ಕೂ ಆದಾಯ: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬೆಟ್ಟ ವೀಕ್ಷಣ ಸಫಾರಿ ವಾಹನಗಳ ಸಂಚಾರ ಆರಂಭ ಮಾಡಿದ್ದೆ ಆದಲ್ಲಿ ಗಿರಿ ಶ್ರೇಣಿಯಲ್ಲಿ ಪರಿಸರ ಉಳಿಯಲಿದೆ, ಜತೆಗೆ ಗಿರಿಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಇದರೊಂದಿಗೆ ಸರ್ಕಾರಕ್ಕೂ ಭರಪೂರ ಆದಾಯ ಬರಲಿದೆ. ಗಿರಿ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಸಂಚಾರ ನಿಬರ್ಂಧಿಸಿದ್ದೇ ಆದಲ್ಲಿ ಪ್ರವಾಸಿಗರು ಬೆಟ್ಟ ವೀಕ್ಷಣೆ ಸಫಾರಿ ವಾಹನಗಳಲ್ಲಿಯೇ ತೆರಳಬೇಕಾಗುತ್ತದೆ. ಹೀಗೆ ಸಫಾರಿ ವಾಹನಗಳಿಗೆ ದರ ನಿಗದಿಪಡಿಸಿದ್ದೇ ಆದಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ. ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವೀಕ್ಷಣ ಸಫಾರಿ ವಾಹನ ವ್ಯವಸ್ಥೆ ಮಾಡಲಾಗಿದ್ದು, ಅದು ಯಶಸ್ವಿಯೂ ಆಗಿದೆ. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ಸಫಾರಿ ವಾಹನ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಇದೇ ಮಾದರಿಯಲ್ಲಿಯೇ ಚಂದ್ರದ್ರೋಣ ಪರ್ವತ ಶ್ರೇಡಿಯಲ್ಲಿಯೂ ಸಫಾರಿ ವಾಹನಗಳ ವ್ಯವಸ್ಥೆ ಮಾಡಬೇಕು ಎಂಬುದು ಪರಿಸರ ಆಸಕ್ತರ ಒತ್ತಾಯ.

    ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ತೊಡಕು
    ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಪಾರ ಪ್ರಮಾಣದ ವನ್ಯಜೀವಿಗಳು ವಾಸಿಸುತ್ತಿವೆ. ಬೇಸಿಗೆ ಅವಧಿಯಲ್ಲಿ ವನ್ಯಜೀವಿಗಳು ನೀರು ಅರಸಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿವೆ. ಇದೇ ವೇಳೆಯಲ್ಲಿ ಗಿರಿ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವರಿಂದಾಗಿ ವನ್ಯಜೀವಿಗಳ ಸಂಚಾರಕ್ಕೂ ತೊಡಕಾಗಿದೆ. ನೀರು ಅರಸಿ ಬರುವ ವನ್ಯಜೀವಿಗಳು ರಸ್ತೆಯಲ್ಲಿಯೇ ಓಡಾಡುತ್ತಿರುತ್ತವೆ. ಈ ವೇಳೆ ವಾಹನಗಳನ್ನು ಕಂಡಾಗ ವನ್ಯಜೀವಿಗಳು ಬೆದರಿ ಓಡುತ್ತಿವೆ. ಅದರಲ್ಲೂ ವಾರಾಂತ್ಯದಲ್ಲಂತೂ ವನ್ಯಜೀವಿಗಳು ಮುಕ್ತವಾಗಿ ಓಡಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts