

ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಇದೀಗ ಅದೇ ನೆಪೋಟಸಿಂ ಬಗ್ಗೆ ಸುಶಾಂತ್ ಸಿಂಗ್ ಸಂಬಂಧಿ ನೆಪೋಮೀಟರ್ ಅನ್ನೋ ಆ್ಯಪ್ ಲಾಂಚ್ ಮಾಡಿದ್ದು, ಸಡಕ್ಗೆ ಬಾಯ್ಕಾಟ್ ಪಟ್ಟ ಸಿಕ್ಕಿದೆ!
ಆ ಆ್ಯಪ್ ಮೂಲಕ ಸಡಕ್ ಚಿತ್ರದಲ್ಲಿ ಕೆಲಸ ಮಾಡಿರುವವರೆಲ್ಲ ಬಹುತೇಕರು ಒಂದೇ ಕುಟುಂಬಕ್ಕೆ ಸಂಬಂಧಿಸಿದವರಾಗಿದ್ದಾರೆಂಬುದು ಆ್ಯಪ್ ಮೂಲಕ ಗೊತ್ತಾಗಿದ್ದು, ಶೇ. 98 ಸ್ವಜನಪಕ್ಷಪಾತತೆಯಿಂದ ಕೂಡಿದೆ ಎಂದು ನೆಟ್ಟಿಗರು ವೋಟ್ ಮಾಡಿ, ಬಾಯ್ಕಾಟ್ ಸಿನಿಮಾ ಎಂಬ ಅಭಿಯಾನ ಶುರು ಮಾಡಿದ್ದಾರೆ. ಹೌದು, ನೆಪೋಮೀಟರ್ ಆ್ಯಪ್ನಲ್ಲಿ ಒಟ್ಟು 5 ಕೆಟಗೆರಿ ಮಾಡಲಾಗಿದೆ. ಆ ಪೈಕಿ ನಿರ್ಮಾಪಕರು, ಮುಖ್ಯ ಪಾತ್ರಧಾರಿಗಳು, ಪೋಷಕ ಕಲಾವಿದರು, ನಿರ್ದೇಶಕರು, ಬರಹಗಾರರು ಬಹುತೇಕರು ಒಂದೇ ಕುಟುಂಬದಿಂದ ಬಂದವರಾಗಿದ್ದಾರೆ. ಅದೇ ರೀತಿ ನೆಪೋಮಿಟರ್ ಅನ್ನೋ ಟ್ವಿಟರ್ ಖಾತೆ ಸಹ ತೆರೆಯಲಾಗಿದೆ.
‘ಬಾಲಿವುಡ್ನಲ್ಲಿ ನೆಪೋಟಿಸಂ ವಿರುದ್ಧ ಹೋರಾಡಲು ಈ ವೇದಿಕೆ ಸೃಷ್ಟಿ ಮಾಡಿದ್ದೇವೆ. ಒಂದು ಸಿನಿಮಾದಲ್ಲಿನ ನೆಪೋಟಿಸ್ಟಿಕ್ ಪ್ರಮಾಣ ಯಾವ ಮಟ್ಟದಲ್ಲಿದೆ ಮತ್ತು ಹೊರಗಿನ ಕಲಾವಿದರ ಸಂಖ್ಯೆ ಎಷ್ಟಿದೆ ಎಂಬುದನ್ನು ನೀಡುತ್ತೇವೆ. ಒಂದು ವೇಳೆ ನೆಪೋಮೀಟರ್ ಏರುಗತಿಯಲ್ಲಿದ್ದರೆ, ಆ ಚಿತ್ರವನ್ನು ಬೈಕಾಟ್ ಮಾಡಬೇಕು’ ಎಂದು ಟ್ವಿಟ್ ಸಹ ಮಾಡಲಾಗಿದೆ.
ನೆಪೋಮೀಟರ್ ಆ್ಯಪ್ ಅಭಿವೃದ್ಧಿಪಡಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸುಶಾಂತ್ ಸಿಂಗ್ಗೆ ಆದ ಸ್ಥಿತಿ ಇನ್ಯಾರಿಗೂ ಬರುವುದು ಬೇಡ ಎಂದು ನೆಟ್ಟಿಗರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)