More

    ಅಲ್ಲು ಅರ್ಜುನ್​ ಜತೆ ಸೊಂಟ ಬಳುಕಿಸಲು ರೆಡಿಯಾದ್ರಾ ಉತ್ತರದ ಈ ಬೆಡಗಿ?

    ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಅಲ್ಲು ಅರ್ಜುನ್​ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವುದು ಒಂದೆಡೆಯಾದರೆ, ಮೊದಲ ಬಾರಿ ಅರ್ಜುನ್​ ಸಿನಿಮಾ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರು ಪುಷ್ಪ ಸಿನಿಮಾ ಇದೀಗ ಶೂಟಿಂಗ್​ಗೂ ಮುನ್ನ ಐಟಂ ಹಾಡಿನ ಮೂಲಕ ಸದ್ದು ಮಾಡುತ್ತಿದೆ.

    ಇದನ್ನೂ ಓದಿ: ಹಿಂದಿ ಬೆಲ್ ಬಾಟಂಗೆ ವಾಣಿ ರಾಣಿ

    ಹೌದು, ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಇದೀಗ ಚಿತ್ರದಲ್ಲಿನ ಐಟಂ ಹಾಡಿನ ವಿಚಾರವಾಗಿ ಸುದ್ದಿಯಲ್ಲಿದೆ. ದೇವಿಶ್ರೀ ಪ್ರಸಾದ್​ ಕಂಪೋಸ್​ ಮಾಡಿದ ಹಾಡಿಗೆ ನಟಿ ಪಾಯಲ್​ ರಜಪೂತ್​ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸ ಮುಗಿಸಿಕೊಂಡಿರುವ ಪುಷ್ಪ ಚಿತ್ರತಂಡ, ಶೀಘ್ರದಲ್ಲಿ ಶೂಟಿಂಗ್​ಗೆ ಚಾಲನೆ ನೀಡಲಿದೆ. ಅದರಲ್ಲಿ ಮೊದಲಿಗೆ ಐಟಂ ಹಾಡಿನ ಶೂಟಿಂಗ್​ ಮಾಡಿಕೊಳ್ಳುವ ಲೆಕ್ಕಾಚಾರ ಹಾಕಿದೆಯಂತೆ ಚಿತ್ರತಂಡ.

    ಇದನ್ನೂ ಓದಿರಾಗಿಣಿ ಚಂದ್ರನ್ ಲಾ… ಕುತೂಹಲ…

    ದೆಹಲಿ ಮೂಲದ ಪಾಯಲ್ ರಜಪೂತ್, 2012ರಲ್ಲಿ ಸೀರಿಯಲ್​ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದ್ದರು. ಅದಾದ ಬಳಿಕ ಪಂಜಾಬಿಯ ಚನ್ನಾ ಮೇರೆಯಾ ಮೂಲಕ ಪಂಜಾಬಿಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್​ಎಕ್ಸ್ 100 ಚಿತ್ರದ ಮೂಲಕ ಟಾಲಿವುಡ್​ಗೆ ಆಗಮಿಸಿ ಸಖತ್​ ಹವಾ ಸೃಷ್ಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡು ಸದ್ಯ ಸೌಥ್​ನಲ್ಲೇ ಸೆಟಲ್ ಆಗುವ ಪ್ಲ್ಯಾನ್ ಹಾಕಿದ್ದಾರೆ. ಹೀಗಿರುವಾಗ ಪುಷ್ಪ ಚಿತ್ರದಲ್ಲಿನ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    VIDEO| ಇನ್ಸ್ಟಾದಲ್ಲಿ 14 ಮಿಲಿಯನ್​ ಫಾಲೋವರ್ಸ್​ ಆದ್ರು ಅಂತ ಈ ನಟಿ ಹೀಗಾ ಮಾಡೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts