VIDEO| ಇನ್ಸ್ಟಾದಲ್ಲಿ 14 ಮಿಲಿಯನ್​ ಫಾಲೋವರ್ಸ್​ ಆದ್ರು ಅಂತ ಈ ನಟಿ ಹೀಗಾ ಮಾಡೋದು!

Untitled
Published on

ಸದ್ಯ ಐಟಂ ಡಾನ್ಸ್​ ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ ಎಂದರೆ ಅದು ನೋರಾ ಫತೈ. ಕನ್ನಡದಲ್ಲೂ ಈ ನಟಿ ಸೊಂಟ ಬಳುಕಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಸದ್ಯಕ್ಕೆ ಆ ಬಗ್ಗೆ ಇನ್ಮೆಲಷ್ಟೇ ಮಾತುಕತೆ ನಡೆಯಬೇಕಿದೆ. ಇದೀಗ ಇದೇ ನಟಿ ಇನ್​ಸ್ಟಾಗ್ರಾಂನಲ್ಲಿ 14 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಈ ಖುಷಿಯನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ. ಅವರ ಈ ಖ್ಯಾತಿಗೆ ಮೈಲೇಜ್​ ತಂದುಕೊಟ್ಟ ವಿಡಿಯೋವೊಂದನ್ನು ಪೋಸ್ಟ್​ ಮಾಡಿಕೊಂಡು ಧನ್ಯವಾದ ಅರ್ಪಿಸಿದ್ದಾರೆ.

ಹೌದು, 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಲ್ಲಿ ನೃತ್ಯ ಪ್ರದರ್ಶಿಸಿದ್ದರು ನೋರಾ. ಆ ಹಾಡಿನಿಂದ ಅವರ ಸಿನಿಮಾ ಕರಿಯರೇ ಬದಲಾಗಿತ್ತು. ಇಂಟರ್​ನೆಟ್​ನಲ್ಲಿ ಸಖತ್​ ವೈರಲ್ ಆಗಿ ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದಿದ್ದವು. ಇದೀಗ ತಮ್ಮ ಕರಿಯರ್​ ಬೆಳವಣಿಗೆಗೆ ಕೈ ಜೋಡಿಸಿದ ಆ ವಿಡಿಯೋವನ್ನು ಮರು ಪೋಸ್ಟ್ ಮಾಡಿಕೊಂಡಿದ್ದಾರೆ.

ಈ ಒಂದು ವಿಡಿಯೋ ಮೂಲಕ ಸತ್ಯಮೇವ ಜಯತೇ ಸಿನಿಮಾದಲ್ಲಿನ ದಿಲ್​ಬರಾ ಹಾಡಿಗೆ ಹೆಜ್ಜೆ ಹಾಕಿದರು. ಯೂಟ್ಯೂಬ್​ನಲ್ಲಿ ದೊಡ್ಡ ಸಂಚಲನವನ್ನೇ ಆ ಹಾಡು ಮಾಡಿತ್ತು. ಅದಾದ ಬಳಿ ಸ್ತ್ರೀ ಚಿತ್ರದಲ್ಲಿ ಕಾಮರಿಯಾ, ಸ್ಟ್ರೀಟ್ ಡಾನ್ಸರ್​ ಗರ್ಮಿ ಹಾಡಿಗೆ ಹೆಜ್ಜೆ ಹಾಕಿದ್ದರು. ಒಟ್ಟಾರೆಯಾಗಿ 12ಕ್ಕೂ ಅಧಿಕ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ನೋರಾ. ಸಿನಿಮಾ ಸೇರಿ ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net