56ನೇ ವಯಸ್ಸಿನಲ್ಲಿ 8 ಪ್ಯಾಕ್ಸ್​ ಆ್ಯಬ್ಸ್! ಹೇಗಿದೆ ಗೊತ್ತಾ ಶಾರುಖ್ ಹೊಸ ಲುಕ್?

Published on
ಬಾಲಿವುಡ್​ನ ಕಿಂಗ್ ಖಾನ್ ಎಂದು ಫೇಮಸ್ ಆಗಿರುವ ನಟ ಶಾರುಖ್ ಖಾನ್ ಸದ್ಯ ಭರ್ಜರಿಯಾಗಿ ಕಮ್​ಬ್ಯಾಕ್ ಮಾಡಲು ಕಾದಿದ್ದಾರೆ ಎಂಬಂತೆ ಕಾಣುತ್ತಿದೆ. ಕಾರಣ, ಹಲವು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಹೇಗಾದರೂ ಮಾಡಿ ಒಂದು ಸಿನಿಮಾದ ಮೂಲಕ ಮತ್ತೆ ಗೆಲುವು ಪಡೆದು, ಹೆಸರು ಮಾಡಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಇನ್ನು, ಕಮ್ ಬ್ಯಾಕ್ ಮಾಡಲು ಅವರು ಸಕಲ ಸಿದ್ಧತೆ ಮಾಡಿಕೊಂಡಂತಿದೆ. ಹೌದು, ಇದೀಗ ನಟ ಶಾರುಖ್ ಖಾನ್ ಅವರ ಗಮನ ಪೂರ್ತಿ ‘ಪಠಾಣ್’ ಸಿನಿಮಾದ ಮೇಲಿದೆ. ಈ ಚಿತ್ರದಲ್ಲಿ ಕಿಂಗ್ ಖಾನ್​ ಅನ್ನು ಅಭಿಮಾನಿಗಳು ಹೊಸ ಅವತಾರದಲ್ಲಿ ನೋಡಲು ರೆಡಿಯಾಗಬೇಕು. ಯಾಕೆ ಅಂತೀರಾ...?
ಈ ಸಿನಿಮಾದಲ್ಲಿ ತಾವು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅಂತ ಸ್ವತಃ ಶಾರುಖ್ ಅವರೇ ಒಂದು ಲುಕ್ ರಿಲೀಸ್ ಮಾಡಿದ್ದಾರೆ. ಅಂದಹಾಗೆ, ಕೆಲ ದಿನಗಳ ಹಿಂದೆ ಈ ಸಿನಿಮಾದಲ್ಲಿನ ನಟ ಶಾರುಖ್ ಅವರ ಕೆಲವು ಫೋಟೋಗಳು ಲೀಕ್ ಆಗಿದ್ದವು. ಜತೆಗೆ, ಆ ಲೀಕ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದರೆ, ಈಗ ಅಧಿಕೃತವಾಗಿ ನಟ ಶಾರುಖ್ ಖಾನ್ ಅವರೇ ತಮ್ಮ ಈ ಹೊಸ ಚಿತ್ರದ ಲುಕ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಎಲ್ಲರಂತೆ 6 ಅಲ್ಲದೇ 8 ಪ್ಯಾಕ್ಸ್ ಆ್ಯಬ್ಸ್​ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದು, ಫೋಟೋ ವೈರಲ್ ಆಗುತ್ತಿದೆ. ಕಿಂಗ್ ಖಾನ್ ಫೋಟೋಗೆ ಬರೋಬ್ಬರಿ 2 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಬಂದಿವೆ.
ಕೇವಲ ಅಭಿಮಾನಿಗಳು ಅಲ್ಲದೇ, ಹಲವು ಸೆಲೆಬ್ರಿಟಿಗಳು ಕೂಡಾ ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದು, ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ, ಇತ್ತೀಚೆಗೆಯೇ ಈ ಸಿನಿಮಾದಲ್ಲಿನ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಾಹಂ ಅವರ ಲುಕ್ ಸಹ ಬಿಡುಗಡೆಯಾಗಿತ್ತು. ಅವರಿಬ್ಬರ ಲುಕ್ ಸಹ ಸೂಪರ್ ಆಗಿದ್ದರೂ, ನಟ ಶಾರುಖ್ ಮಾತ್ರ ಈಗ ಅಭಿಮಾನಗಳ ನಿದ್ದೆಗೆಡಿಸುತ್ತಿದ್ದಾರೆ. ಕಾರಣ, 56 ವರ್ಷದ ಪ್ರಾಯದಲ್ಲೂ 8 ಪ್ಯಾಕ್ಸ್​ ಆ್ಯಬ್ಸ್​ ಮಾಡುವುದು ಅಷ್ಟು ಸುಲಭವಲ್ಲ. ಶಾರುಖ್ ಅವರ ಫೋಟೋ ಶೇರ್ ಮಾಡಿದ ಅವರ ಪುತ್ರಿ ಸುಹಾನಾ ಖಾನ್ ಕೂಡಾ ಕ್ಯಾಪ್ಷನ್ ''ನನ್ನ ತಂದೆಗೆ 56 ವರ್ಷ'' ಎಂದು ಕೊಟ್ಟಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net