More

    ಪತಿಯ ಸಾವಿನ ಕಾರಣ ಆಧಾರಿತ ಹೊಸ ಚಿತ್ರದೊಂದಿಗೆ ಮತ್ತೆ ತೆರೆ ಮೇಲೆ ಮಿಂಚಲಿದ್ದಾರೆ ಮಾಲಾಶ್ರೀ!

    ಬೆಂಗಳೂರು: ಕಳೆದ ವರ್ಷ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಕರೊನಾದಿಂದ ರಾಮು ಅವರು ಕೊನೆಯುಸಿರು ಎಳೆದ ಬಳಿಕ ಮಾಲಾಶ್ರೀ ತುಂಬಾ ನೋವು ಅನುಭವಿಸಿದ್ದಾರೆ. ಆ ನೋವಿನ ನಡುವೆಯೂ ಈಗ ಅವರು ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಒಂದು ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ, ನಟಿ ಮಾಲಾಶ್ರೀ ಅವರು ಕೊನೆಯದಾಗಿ ನಟಿಸಿದ ಸಿನಿಮಾ ‘ಉಪ್ಪು ಹುಳಿ ಖಾರ’. ಇನ್ನು, ಆ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ನಾಲ್ಕೂವರೆ ವರ್ಷ ಆಗಿದೆ. ನಂತರ, ಅವರು ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ.
    ಇದೀಗ, ಒಂದು ದೀರ್ಘ ಬ್ರೇಕ್​ನ ಬಳಿಕ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಹೊಸ ಸಿನಿಮಾದಲ್ಲಿ ಮಾಲಾಶ್ರೀ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಲಿದ್ದಾರೆ. ಹೌದು, 15 ವರ್ಷಗಳ ಕಾಲ ಸೇನೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಿದ ನಂತರ ಊರಿಗೆ ಮರಳಿದ ವೈದ್ಯೆಯಾಗಿ ನಟಿ ಮಾಲಾಶ್ರೀ ಅಭಿನಯಿಸಲಿದ್ದಾರೆ. ಈ ಸಿನಿಮಾಗೆ ಕರೊನಾ ಮಹಾಮಾರಿ ಹರಡಿದ್ದಾಗ ಹಾಗೂ ಲಾಕ್​ಡೌನ್ ಮಾಡಿದಾಗ, ಆ ಸಂದರ್ಭದಲ್ಲಿ ನಡೆದ ನೈಜ ಘಟನೆಗಳೆ ಕಥೆ ಮತ್ತು ಸ್ಪೂರ್ತಿಯಾಗಿಲಿವೆಯಂತೆ.
    ಕರೊನಾದಿಂದ ಪತಿಯನ್ನು ಕಳೆದುಕೊಂಡ ನಟಿಯ ಮನಸ್ಸಿಗೆ ಈ ಸಿನಿಮಾ ತುಂಬಾ ಹತ್ತರವಾಗಿರಬಹುದು ಎಂದು ಊಹಿಸಲಾಗಿದೆ. ಇದು, ಒಂದು ಆ್ಯಕ್ಷನ್, ಥ್ರಿಲ್ಲರ್ ಮತ್ತು ಸೆಂಟಿಮೆಂಟ್ ಸಿನಿಮಾ ಆಗಿರಲಿದೆ. ಈ ಸಿನಿಮಾದ ಬಹುತೇಕ ದೃಶ್ಯಗಳು ಆಸ್ಪತ್ರೆಯಲ್ಲೇ ನಡೆಯುತ್ತವೆ ಎಂಬುದು ಹೈಲೈಟ್ ಎಂದೇ ಹೇಳಬೇಕು. ಟೈಟಲ್ ಇಲ್ಲದ ಈ ಸಿನಿಮಾಗೆ ರವೀಂದ್ರ ವಂಶಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಸಹ ಬರೆದಿದ್ದಾರೆ.
    ಬೆಂಗಳೂರು ಮೂಲದ ಬಿ.ಎಸ್. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇನ್ನು, ಸ್ವರ್ಣಗಂಗಾ ಫಿಲ್ಮ್ಸ್ ಬ್ಯಾನರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಶೂಟಿಂಗ್ ಆರಂಭವಾಗಿದೆ. ಸದ್ಯ, ಒಂದು ಹಂತದ ಚಿತ್ರೀಕರಣವನ್ನು ಮುಗಿಸಲಾಗಿದ್ದು, ಯುಗಾದಿ ಹಬ್ಬ ಮುಗಿದ ನಂತರ 2ನೇ ಹಂತದ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ಮಂಜು ಪಾವಗಡ, ಕುರಿ ರಂಗ, ಅಶ್ವಿನ್, ವರ್ಧನ್ ಸೇರಿ ಮುಂತಾದವರು ಈ ಸಿನಿಮಾದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ

    ದಳಪತಿ ವಿಜಯ್ ನಿಧನ? ಏಡ್ಸ್ ರೋಗಿ ಅಜಿತ್? ಏನಾಗಿದೆ ಈ ಸ್ಟಾರ್ ನಟರ ಅಭಿಮಾನಿಗಳಿಗೆ?

    ವೀಕೆಂಡ್​ ಮೋಜಿನಲ್ಲಿದ್ದ ನಟ ಅಲ್ಲು ಅರ್ಜುನ್​ ಕಾರು ತಡೆದು ಶಾಕ್​ ಕೊಟ್ಟ ಹೈದರಾಬಾದ್​ ಪೊಲೀಸರು!

    ಮೈಮಾಟ ತೋರಿಸುವ ಫೋಟೋ ಹಂಚಿಕೊಂಡು ಟ್ರೋಲರ್​ಗಳಿಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts