KGF ಐಟಂ ಬೆಡಗಿ ಮೌನಿ ರಾಯ್​ ಮದುವೆ ಫೋಟೋಗಳು, ವಿಡಿಯೋಗಳು ವೈರಲ್!

Published on

ಬಾಲಿವುಡ್‌ ಬೆಡಗಿ ಮೌನಿ ರಾಯ್ ಕನ್ನಡಿಗರಿಗೆ ಕೆಜಿಎಫ್ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ಐಟಂ ಹಾಡಿನ ಮೂಲಕ ಸಖತ್ ಹತ್ತಿರವಾದರು. ಆದರೆ, ಸದ್ಯ ಈ ಬೆಡಗಿ ಗೋವಾದಲ್ಲಿ ನಡೆದ ಅವರ ಮದುವೆಯ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ಹೌದು, ಇಂದು (ಜನವರಿ 27) ನಟಿ ಮೌನಿ ರಾಯ್‌ ತಾವು ಪ್ರೀತಿಸಿದ ಸೂರಜ್ ನಂಬಿಯಾರ್ ಅವರನ್ನು ಮದುವೆ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿದ್ದರೂ ಕೂಡ, ಅವರು ಮಾತ್ರ ಮದುವೆ ಆಗುವ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಇತ್ತೀಚೆಗೆ, ಮಾಧ್ಯಮಗಳ ಕಣ್ಣಿಗೆ ಬಿದ್ದಾಗಲೂ ಕೂಡ, ಮದುವೆ ಬಗ್ಗೆ ಮೌನಿ ರಾಯ್ ಮಾತನಾಡಿರಲಿಲ್ಲ.

ಬದಲಿಗೆ ಮದುವೆ ಶುಭಾಶಯ ತಿಳಿಸಿದವರಿಗೆ ವಿಮಾಣ ನಿಲ್ದಾಣದಲ್ಲಿ ಧನ್ಯವಾದ ಹೇಳಿ ಹೋಗಿದ್ದರು. ಇದೀಗ, ಸಾಂಪ್ರದಾಯಿಕವಾಗಿ ಹಲ್ದಿ ಮತ್ತು ಮೆಹೆಂದಿ ಸಮಾರಂಭ ಆಚರಿಸಿಕೊಂಡ ನಂತರ, ನಟಿ ಮೌನಿ ರಾಯ್ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ಕುಟುಂಬ ಮತ್ತು ಸ್ನೇಹಿತರ ಸಮಕ್ಷದಲ್ಲಿ ಮದುವೆಯಾಗಿದ್ದಾರೆ. ನಟಿಯ ಗೊವಾದಲ್ಲಿ ನಡೆದ ಈ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಹಿಂದೆ ಮೌನಿ ಅವರ ಹಲ್ದಿ, ಮೆಹೆಂದಿ ಸಮಾರಂಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net