More

    ಅಜ್ಜಿ ಜತೆ ಹೆಜ್ಜೆ ಹಾಕಿ ‘ತಗ್ಗೆದೆ ಲೆ’ ಎಂದ ಹಾರ್ದಿಕ್ ಪಾಂಡ್ಯ! ಫ್ಯಾನ್ಸ್ ಮನಗೆದ್ದ ವಿಡಿಯೋ ವೈರಲ್…

    ಟಾಲಿವುಡ್​ನ ನಟ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ‘ಪುಷ್ಪ: ದಿ ರೈಸ್’ ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೇ, ಸೋಶಿಯಲ್ ಮೀಡಿಯಾದಲ್ಲೂ ಅದರದ್ದೇ ಹವಾ ಎನ್ನಬಹುದು. ಈಗಾಗಲೇ ಸಿನಿ ತಾರೆಯರು ಈ ಸಿನಿಮಾದ ಹಾಡುಗಳಿಗೆ ಸಖತ್ ಸ್ಟೆಪ್ಸ್​ ಹಾಕುವುದರ ಜತೆಗೆ ಡೈಲಾಗ್​ಗಳನ್ನು ಅನುಕರಿಸುತ್ತಿದ್ದಾರೆ.
    ಅದರಲ್ಲಿಯೂ, ಪುಷ್ಪಹುಚ್ಚು ಕ್ರಿಕೆಟಿಗರಲ್ಲಿ ಹೆಚ್ಚಾಗಿದೆ. ನಮ್ಮ ದೇಶವಲ್ಲದೇ ಬೇರೆ ಬೇರೆ ದೇಶಗಳ ಕ್ರಿಕೆಟಿಗರು ರೀಲ್ಸ್ ಮಾಡುತ್ತಾ ಟ್ರೆಂಡ್ ಮಾಡುತ್ತಿದ್ದಾರೆ. ಕ್ರಿಕೆಟಿಗ ಡೇವಿಡ್ ವಾರ್ನರ್ ಶ್ರೀವಲ್ಲಿಹಾಡಿಗೆ ಹೆಜ್ಜೆಹಾಕಿದ್ದರು. ಸುರೇಶ್ ರೈನಾ ಹಾಗೂ ಡ್ವೇನ್ ಬ್ರಾವೋ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನಂತರ, ರವೀಂದ್ರ ಜಡೇಜಾ ಮತ್ತು ಶಿಖರ್ ಧವಾನ್ ಅಲ್ಲು ಅರ್ಜುನ್ ಅವರ ಡೈಲಾಗ್​ಗಳನ್ನು, ಲುಕ್​ಗಳನ್ನು ಅನುಕರಿಸಿದ್ದಾರೆ.
    ಬಾಂಗ್ಲಾ ಬೌಲರ್​ ಒಬ್ಬರು ಕೂಡ ತಗ್ಗೆದೆ ಲೆ‘ ಡೈಲಾಗ್​ ಆ್ಯಕ್ಷನ್ BPLನ ಒಂದು ಮ್ಯಾಚ್​ ನಡುವೆ ವಿಕೆಟ್ ಕಿತ್ತಾಗ ಮಾಡಿದ್ದಾರೆ. ಸದ್ಯ, ಭಾರತ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ಈ ಸಿನಿಮಾದ ‘ಶ್ರೀವಲ್ಲಿ’ ಹಾಡಿಗೆ ಕುಣಿದಿದ್ದಾರೆ. ಇಲ್ಲಿ ಗಮನಾರ್ಹ ಏನೆಂದರೆ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಅಜ್ಜಿ ಭರ್ಜರಿ ಹೆಜ್ಜೆ ಹಾಕಿರುವುದು. ಹೌದು, ಇನ್​ಸ್ಟಾಗ್ರಾಂನಲ್ಲಿ ತಮ್ಮ ಅಜ್ಜಿಯೊಂದಿಗೆ ಶ್ರೀವಲ್ಲಿಹಾಡಿಗೆ ಹೆಜ್ಜೆಹಾಕಿರುವ ರೀಲ್ಸ್ ವಿಡಿಯೋವೊಂದನ್ನು ಹಾರ್ದಿಕ್ ಶೇರ್ ಮಾಡಿಕೊಂಡಿದ್ದಾರೆ.
    ಮಸ್ತ್​ ಸ್ಟೆಪ್ಸ್ ಹಾಕಿರುವ ಹಾರ್ದಿಕ್ ಹಾಗೂ ಅವರ ಅಜ್ಜಿಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಜತೆಗೆ, ಹಾಡಿನ ನಂತರ ತಗ್ಗೆದೆ ಲೆಎಂದು ಖಡಕ್ ಆಗಿ ಅಜ್ಜಿ ಮತ್ತು ಮೊಮ್ಮಗ ಪೋಸ್ ನೀಡಿದ್ದಾರೆ. ಇವರಿಬ್ಬರ ಈ ವಿಡಿಯೋ ಮೇಲೆ 1 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಇದ್ದು, 8,000 ಕ್ಕೂ ಹೆಚ್ಚು ಕಾಮೆಂಟ್​ಗಳಿವೆ. ಇನ್ನು, ಲಕ್ಷ ಲಕ್ಷ ವೀಕ್ಷಣೆಗಳು ಇವೆ.  

    ಅಜ್ಜಿ ಜತೆ ಹೆಜ್ಜೆ ಹಾಕಿ 'ತಗ್ಗೆದೆ ಲೆ' ಎಂದ ಹಾರ್ದಿಕ್ ಪಾಂಡ್ಯ! ಫ್ಯಾನ್ಸ್ ಮನಗೆದ್ದ ವಿಡಿಯೋ ವೈರಲ್...

    ನೋವಿನಲ್ಲೂ ಅಪ್ಪು ಅಭಿಮಾನಿಯ ಯೋಗಕ್ಷೇಮ ವಿಚಾರಿಸಿದ ಅಶ್ವಿನಿ ಪುನೀತ್! ವಿಡಿಯೋ ವೈರಲ್…

    ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು! ‘ಜೇಮ್ಸ್’ ವಿಶೇಷ ಪೋಸ್ಟರ್‌ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts