ನೋವಿನಲ್ಲೂ ಅಪ್ಪು ಅಭಿಮಾನಿಯ ಯೋಗಕ್ಷೇಮ ವಿಚಾರಿಸಿದ ಅಶ್ವಿನಿ ಪುನೀತ್! ವಿಡಿಯೋ ವೈರಲ್...

Published on
ಹಿಮಾಚಲ ಪ್ರದೇಶದ ಮಣಿಕರಣ್​ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್​ನೇರ್ ಗುರುಪ್ರಕಾಶ್‘ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿ ದೊಡ್ಮನೆ ಕುಟುಂಬದ ಶಿವಣ್ಣ, ರಾಘಣ್ಣ ಅವರು ಸನ್ಮಾನಿಸಿದ್ದರು. ಬಳಿಕ, ಗುರು ಪ್ರಕಾಶ್ ಗೌಡ ಅವರನ್ನು ತಮ್ಮ ಮನೆಯ ಬಳಿ ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಕೂಡ, ಅಪ್ಪು ಅವರ ಈ ಅಪರೂಪದ ಅಭಿಮಾನಿಯನ್ನು ಅಭಿನಂದಿಸಿದ್ದಾರೆ.
ಇದೀಗ, ‘ಮೌಂಟ್​ನೇರ್ ಗುರುಪ್ರಕಾಶ್‘ ಅವರನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಕೂಡ ಭೇಟಿ ಮಾಡಿ ಅಭಿನಂದಿಸಿ, ಭಾವುಕರಾಗಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಅಪ್ಪು ಅಭಿಮಾನಿಯನ್ನು ಭೇಟಿಯಾದ ಅಶ್ವಿನಿ ಅವರ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ತಮ್ಮ ಮನಸ್ಸಿನಲ್ಲಿ ಬಹಳಷ್ಟು ನೋವಿದ್ದರೂ ಸಹ ಅಶ್ವಿನಿ ಅವರು ಬಂದು ಸೈಕಲ್ ತುಳಿದ ಅಪ್ಪು ಅಭಿಮಾನಿ ಗುರು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net