More

    ಗಣರಾಜ್ಯೋತ್ಸವದಂದು ಶಕ್ತಿಧಾಮ ಮಕ್ಕಳ ಜೊತೆ ಸ್ಕೂಲ್ ಬಸ್​ನಲ್ಲಿ ಜಾಲಿ ರೈಡ್! ಶಿವಣ್ಣ ವಿಡಿಯೋ ವೈರಲ್…

    ಇಂದು ದೇಶದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಹೌದು, ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿ, ಎಲ್ಲಾ ರಾಜ್ಯಗಳ ಕಲೆಯನ್ನು ಗೌರವಿಸಿ, ದೇಶಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸುವ ದಿನ ಇದಾಗಿದೆ. ಹಾಗಾಗಿ, ಈ ಸಂದರ್ಭದಲ್ಲಿ ಸೆಂಚುರಿ ಸ್ಟಾರ್ ನಟ ಶಿವರಾಜ್​ಕುಮಾರ್​ ಅವರು ಮೈಸೂರಿನ ಶಕ್ತಿಧಾಮದಲ್ಲಿ ಪತ್ನಿ ಗೀತಾ ಶಿವರಾಜ್​ಕುಮಾರ್ ಜೊತೆ ಸೇರಿ ಧ್ವಜಾರೋಹಣ ಮಾಡಿದ್ದಾರೆ.
    ಈ ಸಮಯದಲ್ಲಿ ಧ್ವಜಾರೋಹಣಕ್ಕೆ ನಟ ಗುರುದತ್, ಶಕ್ತಿಧಾಮ ಆಶ್ರಮದ ಮಕ್ಕಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ಬಳಿಕ, ಶಿವಣ್ಣ ಅನಾಥ ಮಕ್ಕಳಿಗೆ ಸಿಹಿ ಹಂಚಿದರು. ನಂತರ ಮಕ್ಕಳ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ ಶಿವಣ್ಣ, ಗೀತಾ ಶಿವರಾಜ್​ಕುಮಾರ್. ತಮ್ಮ ಸಿನಿಮಾಗಳ ಶೂಟಿಂಗ್ ಕೆಲಸದಲ್ಲಿ ಬ್ಯೂಸಿ ಇದ್ದರು, ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುವು ಮಾಡಿಕೊಂಡು ಆಶ್ರಮದ ಮಕ್ಕಳಿಗಾಗಿ ಈ ದಿನವನ್ನು ಮೀಸಲಿಟ್ಟರು ಶಿವಣ್ಣ.
    ಇದಿಷ್ಟೇ ಅಲ್ಲದೇ, ಆಶ್ರಮದ ಮಕ್ಕಳ ಜೊತೆ ಶಿವಣ್ಣ ಸ್ಕೂಲ್ ಬಸ್​​ ಅನ್ನು ಸ್ವತಃ ಅವರೇ ಡ್ರೈವ್ ಮಾಡುವ ಮೂಲಕ ಮಕ್ಕಳ ಆಸೆಯನ್ನ ಪೂರೈಸಿದ್ದಾರೆ. ಶಿವಣ್ಣ ಮತ್ತು ಮಕ್ಕಳ ಈ ಜಾಲಿ ರೈಡ್​ನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಂದು ಶಿವಣ್ಣನ ಅವರ ಜೊತೆ ಬೆರೆತ ಶಕ್ತಿಧಾಮದ ಮಕ್ಕಳು ಕೂಡ ಖುಷಿಖುಷಿಯಾಗಿ ಕಾಲ ಕಳೆದರು

    ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು! ‘ಜೇಮ್ಸ್’ ವಿಶೇಷ ಪೋಸ್ಟರ್‌ ವೈರಲ್…

    ಸೆಲೆಬ್ರಿಟಿಗಳದ್ದು ನಾರ್ಸಿಸ್ ಧೋರಣೆ! ಬಾಡಿಗೆ ತಾಯ್ತನದ ಬಗ್ಗೆ ಹೆಚ್ಚಾಗುತ್ತಿದೆ ಆಕ್ರೋಶ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts