ನಮ್ಮ ದೇಶದಲ್ಲಿಯೇ ಹಲವು ಸೆಲೆಬ್ರಿಟಿಗಳು, ಅದರಲ್ಲಿಯೂ ಬಾಲಿವುಡ್ನಲ್ಲಿ ಸರೊಗಸಿ ಮಾದರಿಯಲ್ಲಿ ಮಗು ಪಡೆದಿದ್ದಾರೆ. ನಿರ್ಮಾಪಕ ಕರಣ್ ಜೋಹರ್, ನಟ ಶಾರುಖ್ ಖಾನ್, ನಟಿ ಪ್ರೀತಿ ಜಿಂಟಾ, ನಿರ್ಮಾಪಕಿ ಏಕ್ತಾ ಕಪೂರ್, ನಟ ತುಷಾರ್ ಕಪೂರ್, ನಟಿ ಸನ್ನಿ ಲಿಯೋನ್, ನಟ ಶ್ರೇಯಸ್ ತಲಪಡೆ, ನಟಿ ಶಿಲ್ಪಾ ಶೆಟ್ಟಿ ಹೀಗೆ ಹಲವಾರು ಸೆಲೆಬ್ರಿಟಿಗಳು ಈ ಮಾದರಿಯಲ್ಲಿ ಮಗು ಪಡೆದಿದ್ದಾರೆ. ಸರೊಗಸಿ ವಿಧಾನದಲ್ಲಿ ಮಕ್ಕಳನ್ನು ಹೆತ್ತು ಕೊಡಲು ಹಲವು ಮಹಿಳೆಯರು ಸಾಲುಗಟ್ಟಿದ್ದಾರೆ ಎನ್ನಲಾಗುತ್ತದೆ. ಜತೆಗೆ, ಮಗು ಜನಿಸಿದ ನಂತರವೂ ಯಾವ ಮಹಿಳೆಯಿಂದ ಮಕ್ಕಳನ್ನು ಪಡೆದಿರುವ ಮಾಹಿತಿಯನ್ನು ಹೊರಕ್ಕೆ ಬರದಂತೆ ಸೆಲೆಬ್ರಿಟಿಗಳು ಎಚ್ಚರಿಕೆ ವಹಿಸುತ್ತಾರೆ.