ಈಗಾಗಲೇ, ಜನಸಾಮಾನ್ಯರ ಜತೆಗೆ ಹಲವು ಸೆಲೆಬ್ರಿಟಿಗಳು, ಕ್ರಿಕೆಟಿಗರು ಚಿತ್ರದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದು ಮತ್ತು ಡೈಲಾಗ್ಗಳನ್ನು ಅಲ್ಲು ಅವರ ಹಾಗೆ ಅನುಕರಿಸುತ್ತಿದ್ದಾರೆ. ಸದ್ಯ, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್ಗೆ ಎರಡು ದಿನಗಳ ಹಿಂದೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಭಾನುವಾರದಂದು ಪಂದ್ಯದಲ್ಲಿ ವಿಕೆಟ್ ತೆಗೆದ ಬಾಂಗ್ಲಾ ಬೌಲರ್ ಕೂಡ 'ಪುಷ್ಪ' ಚಿತ್ರದಲ್ಲಿ 'ತಗ್ಗೆದೆ ಲೇ' ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್ ಮಾಡುವ ಆ್ಯಕ್ಷನ್ ಅನ್ನು ಮಾಡಿ 'ತಗ್ಗೆದೆ ಲೇ' ಎಂದು ಸಂಭ್ರಮಿಸಿದ್ದಾರೆ.