ಡೇವಿಡ್ ವಾರ್ನರ್ ಮಕ್ಕಳು ಕೂಡ 'ಪುಷ್ಪ' ಹಾಡಿಗೆ ಡ್ಯಾನ್ಸ್‌! ವಿಡಿಯೋ ವೈರಲ್...

Published on
ಪುಷ್ಪ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಕೂಡ ಬಿಡುಗಡೆ ಆಗಿದೆ. ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರ ಕೋಟಿ ಕೋಟಿ ಗಳಿಕೆ ಸಹ ಮಾಡಿದೆ. ಆದರೆ, ಈ ಸಿನಿಮಾದ ಹಾಡುಗಳು ಮಾತ್ರ ಸಣ್ಣ ಮಕ್ಕಳ ಬಾಯಲ್ಲೂ ಕೇಳಿಬರುತ್ತಿವೆ. ಚಿತ್ರದಲ್ಲಿನ ಎಲ್ಲಾ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ನಮ್ಮ ದೇಶ ಮಾತ್ರವಲ್ಲದೇ, ಬೇರೆ ಬೇರೆ ದೇಶಗಳಲ್ಲೂ ಈ ಸಿನಿಮಾದ ಹಾಡುಗಳದ್ದೆ ಹವಾ.
ನಟಿ ರಶ್ಮಿಕಾ ಅವರ ನೃತ್ಯದಿಂದ 'ಸಾಮಿ ಸಾಮಿ' ಹಾಡಂತೂ ಇನ್ನು ಸಿಕ್ಕಾಪಟ್ಟೆ ಫೇಮಸ್ ಎಂದೇ ಹೇಳಬೇಕು. ಈ ಹಾಡಿಗೆ ಬಹಳಷ್ಟು ಜನ ಮೀಮ್ಸ್, ರೀಲ್ಸ್ ಅಂತ ಕುಣಿದು ಕುಪ್ಪಳಿಸಿದ್ದಾರೆ. ಇದೀಗ, ಈ ಹಾಡಿಗೆ ಆಸ್ಟ್ರೇಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್ ಅವರ ಇಬ್ಬರು ಹೆಣ್ಣುಮಕ್ಕಳು ಕೂಡ ಇನ್ಸ್‌ಗ್ರಾಮ್‌ನಲ್ಲಿ ರೀಲ್ಸ್ ವಿಡಿಯೋ ಮಾಡಿ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಮಕ್ಕಳ ಈ ಡ್ಯಾನ್ಸಿಗೆ ವಾರ್ನರ್ ಅವರು, "ಮಮ್ಮಿ ಡ್ಯಾಡಿಗೂ ಮೊದಲೇ ಮಕ್ಕಳು ಸಾಮಿ ಸಾಮಿ ಹಾಡನ್ನು ಟ್ರೈ ಮಾಡಿದ್ದಾರೆ" ಎಂಬ ಕ್ಯಾಪ್ಷನ್ ನೀಡಿದ್ದಾರೆ. ಡೇವಿಡ್ ವಾರ್ನರ್ ಮಕ್ಕಳ ಈ ರೀಲ್ಸ್ ವಿಡಿಯೋಗೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೆ ವಾರ್ನರ್ ಅವರು ಕೂಡ ಇದೇ ಸಿನಿಮಾದ 'ಶ್ರೀವಲ್ಲಿ' ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು. ನಟ ಅಲ್ಲು ಅರ್ಜುನ್ ಈ ಹಾಡಿನಲ್ಲಿ ಮಾಡಿದ ಸ್ಟೆಪ್ ಅನ್ನು ಅವರು ಅನುಕರಿಸಿದ್ದರು. ಅವರ ವಿಡಿಯೋ ಕೇವಲ ಎರಡು ಗಂಟೆಗಳಲ್ಲಿ 25 ಲಕ್ಷ ವೀಕ್ಷಣೆ ಮತ್ತು 7.14 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿತ್ತು. ಆದರೆ, ಈಗ ಮಿಲಿಯನ್ ಗಟ್ಟಲೆ ವೀಕ್ಷಣೆ ಮತ್ತು ಲೈಕ್ಸ್ ಇವೆ. ಇನ್ನು, ಅವರ ಮಕ್ಕಳ 'ಸಾಮಿ ಸಾಮಿ' ಹಾಡಿನ ವಿಡಿಯೋಗೆ 7 ಲಕ್ಷ ಲೈಕ್ಸ್ ಇದ್ದು, 9000ಕ್ಕೂ ಹೆಚ್ಚು ಕಾಮೆಂಟ್​ಗಳು ಇವೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net