ಮುಂಬೈ: ಸಿನಿ ಸೆಲೆಬ್ರಿಟಿಗಳು ಬರಿ ದುಬಾರಿ, ಬ್ರ್ಯಾಂಡೆಡ್ ಬಟ್ಟೆಗಳನ್ನ ಧರಿಸುತ್ತರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುತ್ತೆ. ಹೌದು, ಟ್ರೆಂಡಿ ಔಟ್ಫಿಟ್ಸ್ ಧರಿಸುವುದು ಸೆಲೆಬ್ರಿಟಿಗಳ ವೃತ್ತಿ ಜೀವನಕ್ಕೆ ಅನಿವಾರ್ಯ ಎಂದೇ ಹೇಳಬೇಕು. ಇದಕ್ಕೆ, ಒಳ್ಳೆಯ ಉದಾಹರಣೆ ಎಂದರೆ ಅದು ಬಾಲಿವುಡ್ನ ಹಾಟ್ ಬೆಡಗಿ ಕತ್ರಿನಾ ಕೈಫ್. ಸದ್ಯ, ಇವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಏನು ಅಂತೀರಾ? ಇತ್ತೀಚೆಗೆ, ಕತ್ರಿನಾ ಅವರು ಮುಂಬೈನ ಏರ್ಪೋರ್ಟ್ನಲ್ಲಿ ಧರಿಸಿದ ಹಸಿರು ಪೈಜಾಮಾದ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.