ಹೌದು, ಭಾರಿ ಮೊತ್ತಕ್ಕೆ 'ಬಡವ ರಾಸ್ಕಲ್' ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು, ಈಗಾಗಲೇ ತೆಲುಗಿನಲ್ಲಿ ಸಿನಿಮಾದ ಡಬ್ಬಿಂಗ್ ಕೂಡ ಆರಂಭವಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ, ಆದಷ್ಟು ಬೇಗ 'ಬಡವ ರಾಸ್ಕಲ್' ಚಿತ್ರದ ತೆಲುಗು ಡಬ್ಬಿಂಗ್ ವರ್ಷನ್ ತೆರೆಗಪ್ಪಳಿಸಲಿದೆ. ಜತೆಗೆ, 'ಬಡವ ರಾಸ್ಕಲ್' ತಮಿಳು ಒಟಿಟಿಗೂ ಸೇಲ್ ಆಗಿದ್ದು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ತಮಿಳು ವರ್ಸನ್ನ ಚಿತ್ರ ಕೂಡ ಬಿಡುಗಡೆಯಾಗುತ್ತೆ. ಹೀಗೆ, ಒಂದರ ನಂತರ ಮತ್ತೊಂದು ಎಂಬಂತೆ ಡಾಲಿ ಸಖತ್ ಯಶಸ್ಸು ಕಾಣುತ್ತಿದ್ದು, ಅವರ ಶ್ರಮಕ್ಕೆ ಈಗ ಫಲ ಸಿಗುತ್ತಿದೆ ಅನಿಸುತ್ತೆ.