

ಹೈದರಾಬಾದ್: ಸ್ಟಾರ್ ನಟರು ತಮ್ಮದೇ ಸ್ವಂತ ಕ್ಯಾರವಾನ್ ಹೊಂದುವ ಸಂಗತಿ ಹೊಸದೇನಲ್ಲ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಟಾಲಿವುಡ್ನಲ್ಲಿ ಈಗಾಗಲೇ ತಮ್ಮ ಲಕ್ಷುರಿ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಅದೇ ಸಾಲಿಗೆ ಇದೀಗ ಸೂಪರ್ಸ್ಟಾರ್ ಮಹೇಶ್ ಬಾಬು ಸಹ ಸೇರಿಕೊಂಡಿದ್ದಾರೆ.
ಭವ್ಯ ಕ್ಯಾರವಾನ್ನಲ್ಲಿ ಬಾತ್ರೂಮ್, ಹಾಲ್, ಅಡುಗೆ ಮನೆ ಮತ್ತು ಟಿವಿ ಸೇರಿದಂತೆ ಅನೇಕ ಸೌಲಭ್ಯಗಳು ಇರುತ್ತವೆ. ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಬಳಿಯು ಕ್ಯಾರವಾನ್ ಇದೆ. ಶಾರುಖ್ ಬಳಿಯಿರುವ ವ್ಯಾನಿಟಿ ವ್ಯಾನ್ ಮೌಲ್ಯ ಬರೋಬ್ಬರಿ 6.25 ಕೋಟಿ ರೂಪಾಯಿ. ಆದರೆ, ಮಹೇಶ್ ಬಾಬು ಕ್ಯಾರವಾನ್ ಇದನ್ನು ಮೀರಿಸಿದೆ.
ಅಂದರೆ, ಮಹೇಶ್ ಬಾಬು ಅವರು 8 ಕೋಟಿ ರೂ. ನೀಡಿ ಕ್ಯಾರವಾನ್ ಖರೀದಿಸಿದ್ದಾರೆ. ಇದು ತೆಲುಗು ಚಿತ್ರರಂಗದಲ್ಲಿ ಸೆಲೆಬ್ರಿಟಿ ಹೊಂದಿರುವ ಅತಿ ದುಬಾರಿ ಕ್ಯಾರವಾನ್ ಎಂಬ ಹೆಸರು ಗಳಿಸಿದೆ.
ಇನ್ನು ಮಹೇಶ್ ಬಾಬು ಅವರು ಪ್ರಸ್ತುತ ಸರ್ಕಾರು ವಾರಿ ಪಾಟ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದು, ಪರುಶುರಾಮ್ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. (ಏಜೆನ್ಸೀಸ್)