

ಬೆಂಗಳೂರು: ನೇರ ಮಾತುಗಳಿಂದಲೇ ಸದಾ ಸುದ್ದಿಯಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಿಗ್ಬಾಸ್ ಮನೆಯೊಳಗೆ ಭಾವನಾತ್ಮಕವಾಗಿ ತುಂಬಾ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ಎಪಿಸೋಡ್ ಒಂದರಲ್ಲಿ ಪ್ರಶಾಂತ್ ತುಂಬಾ ಭಾವುಕರಾದರು.
ಕನ್ಫೆಸ್ಸನ್ ರೂಮ್ ಒಳಗೆ ಬಿಗ್ಬಾಸ್ ಜತೆ ಸಂಭಾಷಣೆ ನಡೆಸುವಾಗ ಪ್ರಶಾಂತ್ ತಮ್ಮ ಆಳವಾದ ಭಾವನೆಗಳನ್ನು ಹೊರಗಡೆವಿದರು. ತಮ್ಮ ಕುಟುಂಬ ಸದಸ್ಯರನ್ನು ನೆನೆದು ತುಂಬಾ ಭಾವುಕರಾದರು.
ಪ್ರಸ್ತುತ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುವಾಗ ಪ್ರಶಾಂತ್ ಅವರು ತಮ್ಮ ಹೆಂಡತಿಯನ್ನು ನೆನಪಿಸಿಕೊಂಡರು. ಅವರ ಪತ್ನಿ ಆಯುರ್ವೇದಿಕ್ ಡಾಕ್ಟರ್ ಎಂದು ಉಲ್ಲೇಖಿಸಿದ ಪ್ರಶಾಂತ್, ಗಂಟಲು ಸೋಂಕಿಗೂ ಔಷಧಿಗಳನ್ನು ಪಡೆಯುವವರೆಗೂ ನಿಜವಾಗಿಯೂ ತನ್ನ ಹೆಂಡತಿ ಅಥವಾ ಕುಟುಂಬದ ಸದಸ್ಯರನ್ನು ಮಿಸ್ ಮಾಡಿಕೊಂಡೆ ಅನಿಸಲಿಲ್ಲ ಎಂದರು.
ತಮ್ಮ ಆರೋಗ್ಯದ ಕಾಳಜಿ ವಹಿಸುತ್ತಿದ್ದ ಪತ್ನಿಯನ್ನು ನೆನೆದು ಪ್ರಶಾಂತ್ ಕಣ್ಣೀರಿಟ್ಟರು. ಇದೇ ವೇಳೆ ಬಿಗ್ಬಾಸ್ ಮನೆಯೊಳಗೆ ಓರ್ವ ಸ್ಪರ್ಧಿಯಾಗಿ ತಮ್ಮ ಪಯಣದ ಬಗ್ಗೆ ಮಾತನಾಡಿದರು. ಬಿಗ್ಬಾಸ್ ಮನೆ ಅಚ್ಚರಿಗಳಿಂದ ತುಂಬಿದೆ. ಜೀವಮಾನದಲ್ಲಿ ಅನುಭವಿಸಲು ಒಮ್ಮೆ ಮಾತ್ರ ಸಿಗುವ ಅವಕಾಶ ಎಂದರು.
ಉದ್ಯಮಿ ಮತ್ತು ಕನ್ನಡ ಚಲನಚಿತ್ರೋದ್ಯಮದ ಗಮನಾರ್ಹ ವ್ಯಕ್ತಿಯಾಗಿರುವ ಪ್ರಶಾಂತ್ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಲ್ಲಿ ಒಬ್ಬರು. ಇದುವರೆಗೂ ವಿವಾದಾತ್ಮಕ ಸ್ಪರ್ಧಿ ಎಂದೇ ಪ್ರಶಾಂತ್ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಭಾರಿ ಸುದ್ದಿ ಮಾಡಿದ್ದರು. (ಏಜೆನ್ಸೀಸ್)‘