More

    ಸ್ಕೂಲ್​ ಬ್ಯಾಗ್​ ಕೊಡಿಸೋ ನೆಪದಲ್ಲಿ ಅಪ್ರಾಪ್ತೆ ಕರೆದೊಯ್ದ ಸ್ನೇಹಿತ: 8 ದಿನ 20 ಮಂದಿಯಿಂದ ನರಕ ದರ್ಶನ!

    ಜೈಪುರ: ಸುಮಾರು ಎಂಟು ದಿನಗಳವರೆಗೆ 20 ಮಂದಿ 15 ವರ್ಷದ ಅಪ್ರಾಪ್ತೆ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ರಾಜಸ್ಥಾನದ ಝಲಾವಾರ್​ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಈ ಘಟನೆ ಸಂಬಂಧಿಸಿದ 20 ಮಂದಿಯನ್ನು ಬಂಧಿಸಲಾಗಿದೆ. ಘಟನೆ ನಡೆದ ಹತ್ತು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

    ಘಟನೆಯ ವಿವರಣೆಗೆ ಬರುವುದಾದರೆ, ಅಪ್ರಾಪ್ತೆಗೆ ನಗರದಲ್ಲಿ ಸ್ಕೂಲ್​ ಬ್ಯಾಗ್​ ತೆಗೆದುಕೊಡುವ ಸೋಗಿನಲ್ಲಿ ಸ್ನೇಹಿತ ಮತ್ತು ಮತ್ತೊಬ್ಬ ಹುಡುಗ ಆಕೆಯನ್ನು ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾರೆ.

    ಇದನ್ನೂ ಓದಿರಿ: Web Exclusive: ಹಾಡಿ ಮಕ್ಕಳಿಗೆ ಚನ್ನಪಟ್ಟಣದ ಆಟಿಕೆಗಳು: ಅಂಗನವಾಡಿಗಳಿಗೆ ಆಟಿಕೆ ಪೂರೈಕೆ!

    ಪಾರ್ಕ್​ ಒಂದರಲ್ಲಿ ಡ್ರಗ್ಸ್​ ನೀಡಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಅಲ್ಲದೆ, ಎಂಟು ದಿನಗಳವರೆಗೆ ನಗರದ ವಿವಿಧ ಸ್ಥಳಗಳಲ್ಲಿ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ರೇಪ್​ ಮಾಡಿದ್ದಾಗಿ ಅಪ್ರಾಪ್ತೆ ಹೇಳಿಕೆ ನೀಡಿದ್ದಾಳೆ.

    ಬಂಧನವಾಗಿ 20 ಆರೋಪಿಗಳಲ್ಲಿ ನಾಲ್ವರು ಅಪ್ರಾಪ್ತರೆಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸ್​ ವರಿಷ್ಠಾಧಿಕಾರಿ ಶರದ್​ ಚೌಧರಿ ಮಾತನಾಡಿ, ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೇವೆ. ಅಪರಾಧ ನಡೆದು ಹತ್ತು ದಿನಗಳಾದರೂ ಅಪ್ರಾಪ್ತೆಯನ್ನು ರಕ್ಷಣೆ ಮಾಡದಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿಗಳಿಬ್ಬರ ಭರ್ಜರಿ ಎಣ್ಣೆ ಪಾರ್ಟಿ!

    ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನ

    ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts